ಕಾವು- ಮಾಡ್ನೂರು ಗ್ರಾಮದಲ್ಲಿ 3 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ

0

ಕಾಂಗ್ರೆಸ್ ಕಾರ್ಯಕರ್ತರು ಧೈರ್ಯದಿಂದ ವೋಟ್ ಕೇಳಲು ಮನೆಗೆ ತೆರಳಬಹುದು: ಅಶೋಕ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ, ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆ ಮನೆಗೆ ತಲುಪಿದೆ , ಜನರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸುವ ಕೆಲಸವನ್ನು ಮಾಡಿದೆ ಈ ಕಾರಣಕ್ಕೆ ಪ್ರತೀಯೊಂದು ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ಧೈರ್ಯದಿಂದ ವೋಟು ಕೇಳಲು ತೆರಳುಬಹುದಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಕಾವು ಮಾಡ್ನೂರು ಗ್ರಾಮದಲ್ಲಿ ಸುಮಾರು 3 ಕೋಟಿ ರೂ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 1500 ಕೋಟಿ ರೂ ಅನುದಾನ ಮಂಜೂರಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 1010 ಕೋಟಿ ರೂ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳು, ದೇವಸ್ಥಾನ, ದೈವಸ್ಥಾನ ಮತ್ತು ಮಸೀದಿ, ತಡೆಗೋಡೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗತ್ಯ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ಪುತ್ತೂರಿಗೆ ಅಗತ್ಯವಾಗಿ ಬೇಕಾಗಿದ್ದ ಮತ್ತು ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಕೆಎಂಎಫ್, ಕೊಯಿಲ ಜಾನುವಾರು ಕೇಂದ್ರ, ಬಿರುಮಲೆ ಬೆಟ್ಟ ಅಭಿವೃದ್ದಿ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಅಭಿವೃದ್ದಿ ಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ಬೇದಭಾವ ಮಾಡದ ಏಕೈಕ ಶಾಸಕ ಅಶೋಕ್ ರೈ: ಕಾವು ಹೇಮನಾಥ ಶೆಟ್ಟಿ
ಅನುದಾನ ಹಂಚಿಕೆ ಮಾಡುವಾಗ ಎಲ್ಲೂ ಬೇದಭಾವ ಮಾಡದೆ ಸಮಾನ ಪ್ರಮಾಣದಲ್ಲಿ ಹಂಚಿಕೆ ಮಾಡಿದ್ದಾರೆ, ಪುತ್ತೂರಿನಲ್ಲಿ ಅನುದಾನವನ್ನು ಸಮಾನ‌ ಪ್ರಮಾಣದಲ್ಲಿ ಹಂಚಿಕೆ ಮಾಡಿರುವ ಏಕೈಕ ಶಾಸಕ ಅಶೋಕ್ ರೈಯವರಾಗಿದ್ದು ಈ ಹಿಂದೆ ಬಂದು ಹೋದವರೆಲ್ಲಾ ತಮಗೆ ಬೇಕಾದ ರೀತಿಯಲ್ಲಿ ಅನುದಾನವನ್ನು ಹಂಚಿಕೆ ಮಾಡಿದ್ದರು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅಶೋಕ್ ರೈ ಅವರು ಶಾಸಕರಾಗಿ ಎಂಟು ತಿಂಗಳಲ್ಲಿ ಮಾಡಿರುವ ಸಾಧನೆ ಅದ್ಬುತವಾಗಿದೆ. ಯಾರೂ ಮಾಡದ ಸಾಧನೆಯನ್ನು ಶಾಸಕರು ಮಾಡಿದ್ದಾರೆ. ಎಲ್ಲೂ ಒಂದಷ್ಟೂ ರಾಜಕೀಯ ಮಾಡದೆ ಸರಕಾರದಿಂದ ಬರುವ ಅನುದಾನವನ್ನು ಗ್ರಾಮದ ಪ್ರತೀ ಮೂಲೆ ಮೂಲೆಗೂ ತಲುಪಿಸಿದ್ದಾರೆ.ಮಾಡ್ನೂರು ಗ್ರಾಮಕ್ಕೆ ಮೂರು ಕೋಟಿ ರೂ ಅನುದಾನವನ್ನು ನೀಡಿದ್ದಾರೆ. ಮೊದಲ ಬಾರಿಗೆ ಕನಿಷ್ಟ ಅವಧಿಯಲ್ಲಿ 3 ಕೋಟಿ ಅನುದಾನವನ್ನು ಒದಗಿಸಿದ್ದು ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಕೈ ಹಿಡಿಯಲಿದೆ ಎಂದು ಹೇಳಿದ ಅವರು ಮಾಡ್ನೂರು ಗ್ರಾಮವು ಮುಂದಿನ ಐದು ವರ್ಷದೊಳಗೆ ಸಂಪೂರ್ಣವಾಗಿ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.

ಗುದ್ದಲಿಪೂಜೆ ಮಾಡಿರುವ ಕಾಮಗಾರಿಗಳು:
ಅಂಕೋತಿಮಾರು ರಸ್ತೆ ಅಭಿವೃದ್ಧಿ ರೂ. 10 ಲಕ್ಷ ,ಮೂಲಡ್ಕ – ನಡುವಡ್ಕ ರಸ್ತೆ ಅಭಿವೃದ್ಧಿ ರೂ. 10 ಲಕ್ಷ ,ಅಶ್ವತ್ತಡಿ ರಸ್ತೆ ಅಭಿವೃದ್ಧಿ ರೂ. 10 ಲಕ್ಷ , ಅಶ್ವತ್ತಡಿ ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಮಾನೀಯಡ್ಕ -ಕರೆಮಾರ್ ರಸ್ತೆ ಅಭಿವೃದ್ಧಿ ರೂ. 5.05 ಲಕ್ಷ , ಮಾಡಂದೂರು ಕಾಲೋನಿ ರಸ್ತೆ ಅಭಿವೃದ್ಧಿ ರೂ. 5.05 ಲಕ್ಷ , ಆಚಾರಿ ಮೂಲೆ ರಸ್ತೆ ಅಭಿವೃದ್ಧಿ ರೂ. 10 ಲಕ್ಷ , ಕೊಚ್ಚಿ ಕೊಳಂಬೆ ರಸ್ತೆ ಅಭಿವೃದ್ಧಿ ರೂ. 5.೦೦ ಲಕ್ಷ , ತೋಟದ ಮೂಲೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ ರೂ. 10 ಲಕ್ಷ, ಅಮ್ಚಿನಡ್ಕ ಬದಿಯಡ್ಕ ಅಲ್ಪ ಸಂಖ್ಯಾ ತರ ಕಾಲೋನಿ ರಸ್ತೆ ಅಭಿವೃದ್ಧಿ ರೂ. 10 ಲಕ್ಷ ,ಕಾವು ಜಂಕ್ಷನ್ ಬಳಿ ರಿಕ್ಷಾ ನಿಲ್ದಾಣ ನಿರ್ಮಾಣ ರೂ. 5 ಲಕ್ಷ ಉಳಿದ ಕಾಮಗಾರಿಗಳಿಗೆ ಈ ಹಿಂದೆಯೇ ಶಿಲಾನ್ಯಾಸ ಮಾಡಲಾಗಿದೆ. ಗ್ರಾಮಕ್ಕೆ ಒಟ್ಟು ಮೂರು ಕೋಟಿ ಅನುದಾನ ಮಂಜೂರಾಗಿದ್ದು ಅರಿಯಡ್ಕ ಗ್ರಾಮಕ್ಕೆ ಬೇರೆಯೇ ಅನುದಾನವನ್ನು ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.


ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಚಂದ್ರಶೇಖರ ಪಾಟಾಳಿ ಪಟ್ಟುಮೂಲೆ,ಮಾಡ್ನೂರು ವಲಯ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ, ಬ್ಲಾಕ್ ಕಾರ್ಯದರ್ಶಿ ಅಮಲ ರಾಮಚಂದ್ರ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್, ಗ್ರಾಪಂ ಸದಸ್ಯ ಪವನ್ ಕುಮಾರ್, ರಾಮಾ ಪಾಂಬಾರು, ಇಸಾಖ್ ಸಾಲ್ಮರ, ಗಂಗಾಧರ ಪಾಟಾಳಿ, ಮಾಡ್ನೂರು ಗ್ರಾಪಂ ಸದಸ್ಯ ಜಯಂತಿ, ಅಬ್ದುಲ್ ರಹಿಮಾನ್, ಸೆಲ್ಮಾ, ಕಾಂಗ್ರೆಸ್ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರ್, ಮಹಮ್ಮದ್ ಕಾವು, ರವಿ ಅಶ್ವತ್ತಡಿ, ಬಿ ಕೆ ಇಬ್ರಾಹಿಂ ಕಾವು, ಅಂಬೋಡಿ ಅಮ್ಚಿನಡ್ಕ, ರಿಕ್ಷಾ ಚಾಲಕ ಬಶೀರ್, ಅಝೀಝ್, ನವೀನಕುಮಾರಿ, ಫಾತಿಮಾ, ನೇಮಾಕ್ಷ ಸುವರ್ಣ ಮಗಿರೆ,ತಾರನಾಥ ಮಡಿವಾಳ, ಇಸುಬು ಮಾಡನ್ನೂರು,ಗುತ್ತು ಜಗನ್ನಾಥ ರೈ, ತಿಮ್ಮಯ್ಯ ಉಜಿರುಗುಳಿ ಸೇರಿದಂತೆ ಗ್ರಾಮಸ್ಥರು , ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here