ಕುಂಬ್ರ: ವಿಕಲಚೇತನೆಯ ಚಿಕಿತ್ಸೆಗೆ ವರ್ತಕರ ಸಂಘದಿಂದ ಆರ್ಥಿಕ ನೆರವು

0

ಪುತ್ತೂರು: ವಿಕಲಚೇತನೆಯೋರ್ವರ ಆರೋಗ್ಯ ಸಂಬಂಧಿ ಚಿಕಿತ್ಸೆಗೆ ಕುಂಬ್ರ ವರ್ತಕರ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು. ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಚೈತ್ರಾರವರು ಅನಾರೋಗ್ಯದಿಂದಾಗಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಈ ಬಗ್ಗೆ ವಿಷಯ ತಿಳಿದ ಕುಂಬ್ರ ವರ್ತಕರ ಸಂಘದ ಪದಾಧಿಕಾರಿಗಳು ಮನೆಗೆ ತೆರಳಿ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ಹಾಗೂ ಚೈತ್ರಾರವರ ಮನೆಯವರು ಉಪಸ್ಥಿತರಿದ್ದರು. ಈ ಹಿಂದೆಯೂ ಚೈತ್ರಾರವರಿಗೆ ವರ್ತಕರ ಸಂಘವು ಹಲವು ರೀತಿಯಲ್ಲಿ ಸಹಕಾರ ನೀಡಿದೆ.

LEAVE A REPLY

Please enter your comment!
Please enter your name here