ಸವಣೂರು: ಸಂಜೀವಿನಿ ಒಕ್ಕೂಟದ ಸಭೆ

0

ಪುತ್ತೂರು: ಶ್ರೀ ರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸವಣೂರು ಪಂಚಾಯತ್ ಇದರ 2023-2024 ನೇ ಮಾಸಿಕ ಒಕ್ಕೂಟ ಸಭೆ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ CHO ಸುಶ್ಮಿತಾ ರವರು ಲಿಂಗತ್ವಾಧಾರಿತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಾಲು ಒಕ್ಕೂಟದ ಕಾರ್ಯದರ್ಶಿ ಹರೀಶರವರು ಪಶು ಇಲಾಖೆ ಬಗ್ಗೆ, ಡೈರಿಯಲ್ಲಿ ಸಿಗುವ ಅನುದಾನದ ಬಗ್ಗೆ ಮಾಹಿತಿ ನೀಡಿದರು. FLCRP ಗೀತಾ ವಿಜಯರವರು ಸಂಜೀವಿನಿ ಬಗ್ಗೆ, ಬ್ಯಾಂಕ್ ಲೋನ್ ಬಗ್ಗೆ, PMJJBY, PMSBY, APY ವಿಮೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಸರ್ ರವರು ಘನ ತ್ಯಾಜ್ಯ ಘಟಕದ ಒಡಂಬಡಿಕೆ ರಿನಿವಲ್ ಮಾಡುವುದರ ಬಗ್ಗೆ ತಿಳಿಸಿದರು. ಕೌಶಲ್ಯ ವಲಯ ಮೇಲ್ವಿಚಾರಕರಾದ ಸುವಿನ ಮೇಡಂರವರ ಟೈಲರಿಂಗ್ ಘಟಕ ನಡೆಸುವ ಬಗ್ಗೆ, ಘಟಕದಲ್ಲಿ ಸ್ವಚ್ಛತೆ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳು,ನಿಕಟಪೂರ್ವ ಅಧ್ಯಕ್ಷೆ ರೇವತಿ, ಸಂಜೀವಿನಿ,ಸ್ತ್ರೀ ಶಕ್ತಿ ಸಂಘದ ಸದಸ್ಯರು ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here