ಪುತ್ತೂರು: ಆಯೋಧ್ಯೆಯ ಶ್ರೀರಾಮ ಮಂದಿರದ ಬ್ರಹ್ಮಕಲಶ ಮತ್ತು ಬಾಲರಾಮನ ಪ್ರಾಣಪ್ರತಿಷ್ಠೆ, ಮಂಡಲೋತ್ಸವ ಮತ್ತು 1008 ಕಲಶಾಭಿಷೇಕದ ಅಂಗವಾಗಿ ಶ್ರೀ ರಾಮಚಂದ್ರಪುರ ಮಠ ಮತ್ತು ಗೋಕರ್ಣದ ಗೋಪಾಲ ಟ್ರಸ್ಟ್ ವತಿಯಿಂದ ನಡೆಸಲಾದ ದ್ವಿ ಕಲಶ ಪೂಜೆಗಳ ಕಲಶ ತೀರ್ಥ ವಿತರಣೆ ಮತ್ತು ಅಯೋಧ್ಯೆ ಕರಸೇವರಿಕಗೆ ಸನ್ಮಾನ ಕಾರ್ಯಕ್ರಮ ಮಾ.15ರಂದು ಮುಳಿಯ ಸಂಸ್ಥೆಯಲ್ಲಿ ನಡೆಯಿತು. ಸನ್ಮಾನಿತರಿಗೆ ಆಯೋಧ್ಯೆ ಪ್ರಸಾದ ತಿಲಕವನ್ನು ಹಚ್ಚಿ, ಅವರಿಗೆ ತೀರ್ಥ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಕಲಶಕ್ಕೆ ಆರತಿ ಬೆಳಗಿಸಿ ಪ್ರಸಾದ ವಿತರಿಸಲಾಯಿತು.
ರಾಮರಾಜ್ಯದ ಕಲ್ಪಣೆಯಲ್ಲಿ ಮುಳಿಯ ಕುಟುಂಬಸ್ಥರಿಗೆ ಧನ್ಯವಾದ ಅರ್ಪಿಸಿದ ಕರಸೇವಕರು:
ಅಯೋಧ್ಯೆ ಕರಸೇವಕರಾಗಿದ್ದ ಗೋಫಲ ಟ್ರಸ್ಟ್‌ನ ಅಧ್ಯಕ್ಷ ಪದ್ಮನಾಭ ಭಟ್ ಕೋಂಕೋಡಿ, ಚಂದ್ರಶೇಖರ್ ರಾವ್ ಬಪ್ಪಳಿಗೆ ಸಹಿತ ಹಲವಾರು ಮಂದಿ ಕರಸೇವಕರು ತಮ್ಮ ಅಂದಿನ ಕರಸೇವೆಯನ್ನು ನೆನಪಿಸಿಕೊಂಡರು. ಅಂದು ಒಟ್ಟು ಹೋರಾಟಕ್ಕೆ ಯುವಕರ ದೊಡ್ಡ ಪಡೆ ಎದ್ದಿತ್ತು. ಇಂತಹ ಸಂದರ್ಭ ಇವತ್ತು ಅದನ್ನು ನೆನಪಿಸಿಕೊಂಡು ನಮಗೆ ನೀಡಿದ ಸನ್ಮಾನ ರಾಮರಾಜ್ಯದ ಕಲ್ಪಣೆಯಲ್ಲಿ ಮುಳಿಯ ಕುಟುಂಬಸ್ಥರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಹಿಂದುತ್ವದ ಕಲ್ಪನೆಯನ್ನು ಎಲ್ಲಾ ಮಕ್ಕಳಿಗೆ ಹೇಳಿಕೊಡುವ ಕೆಲಸವಾಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಮುಳಿಯ ಕೇಶವಪ್ರಸಾದ್ ಅವರು ಮಾತನಾಡಿ ಇದು ನನ್ನ ಭಾಗ್ಯವೆಂಬಂತೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅವಧಿಯಲ್ಲೇ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಯಾಗಿತ್ತು. ಇವತ್ತು ಎಷ್ಟೋ ಶತಮಾನಗಳ ಆಸೆ ಪೂರೈಕೆಯಾಗಿದೆ. ಈಗ ರಾಮ ಪ್ರಸನ್ನ ಕಾಲದಲ್ಲಿದ್ದಾನೆ. ಹಿಂದೆ ರಾಜರುಗಳ ಕಾಲದಲ್ಲಿ ಇರುವಂತಹ ಭವ್ಯ ಕಟ್ಟಡದಂತೆ ಶತಮಾನಗಳ ಕಾಲದ ಮಂದಿರ ನಿರ್ಮಾಣ ಆಗಿದೆ. ಈ ಎಲ್ಲದಕ್ಕೂ ಕಾರಣರಾದ ಮೋದಿ ಶಖಪುರುಷರಾಗಿದ್ದಾರೆ. ಮುಂದೆ ರಾಮ ರಾಜ್ಯದ ಕಲ್ಪಣೆಯಂತೆ ಹಿಂದುತ್ವದ ಕಲ್ಪಣೆಯನು ಎಲ್ಲಾ ಮಕ್ಕಳಿಗೂ ಹೇಳಿಕೊಡುವ ಕೆಲಸ ಆಗಬೇಕೆಂದರು.
ಗೋ ಸೇವೆ, ಸಮಾಜ ಸೇವೆಯ ಫಲ ದೇವರ ಮುಂದೆ ಸಂಗೀತ ಹಾಡಲು ಅವಕಾಶ ಲಭಿಸಿತು:
ಕೃಷ್ಣವೇಣಿ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ ಅಯೋಧ್ಯ ನಿರ್ಮಾಣ ನಮ್ಮೆಲ್ಲರ ಕನಸಾಗಿತ್ತು ಅದರಲ್ಲಿ ಕರಸೇವಕರ ಶ್ರಮ ಹೇಳತೀರದು ಎಂದ ಅವರು ನನಗೂ ಒಂದು ಸೇವೆ ದೇವರ ಮುಂದೆ ಲಭಿಸಿತು. ಗೋ ಸೇವೆ ಮತ್ತು ಸಮಾಜ ಸೇವೆ ಮಾಡಿದ್ದರಿಂದ ದೇವರ ಮುಂದೆ ಸಂಗೀತ ಹಾಡುವ ಅವಕಾಶ ಸಿಕ್ಕಿತ್ತು ಎಂದ ಅವರು ಅಯೋಧ್ಯೆಗೆ ಹೋಗಿ ಅಲ್ಲಿ ನೀಡಿದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮುಳಿಯ ಸಿಬ್ಬಂದಿಗಳಿಗೆ ಆಯೋಧ್ಯೆ ಪ್ರವಾಸದ ಭಾಗ್ಯ
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಶ್ರೀ ರಾಮ ಮಂದಿರದ ಹೋರಾಟದ ಸಂದರ್ಭ ನಮಗೆ ಕರಸೇವೆಗೆ ಅವಕಾಶ ಸಿಗಲಲ್ಲ ಎಂಬ ಬೇಸರ ಒಂದು ಕಡೆಯದಾದರೆ ಇವತ್ತು ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ಆಗಿರುವ ಸಂದರ್ಭ ನಾವೆಲ್ಲ ಇರುವುದು ಶ್ರೀ ರಾಮ ಕಲ್ಪಿಸಿದ ಸೌಭಾಗ್ಯ ಎಂದ ಅವರು ಅಯೋಧ್ಯೆಯ ಈ ಭವ್ಯ ಮಂದಿರಕ್ಕೆ ನಮ್ಮ ಸಿಬ್ಬಂದಿಗಳನ್ನು ಕರೆದು ಕೊಂಡು ಹೋಗುವ ಚಿಂತನೆ ಇದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಅವರೆನ್ನೆಲ್ಲ ಕರೆದು ಕೊಂಡು ಹೋಗಲಿದ್ದೇವೆ. ಈ ಪ್ರವಾಸದಲ್ಲಿ ಕರಸೇವಕರು ನಮ್ಮ ಜೊತೆ ಬರುವುದಾದರೆ ಅವರ ಖರ್ಚು ವೆಚ್ಚಗಳನ್ನು ಮುಳಿಯದಿಂದ ಬರಿಸಲಾಗುವುದು ಎಂದು ಅವರು ಹೇಳಿದರು. ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ.ಕೆ.ವೀಣಾ, ಬಿ.ಐತ್ತಪ್ಪ ನಾಯ್ಕ್, ನಗರಸಭೆ ಮಾಜಿ ಉಪಾಧ್ಯಕ್ಷ ವಿನಯ ಭಂಡಾರಿ, ಬಜರಂಗದಳದ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ, ಸಂತೋಷ್ ಬೋನಂತಾಯ, ಸುಹಾಸ್ ಮರಿಕೆ, ಬಾಲಕೃಷ್ಣ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರಾರ್ಥಿಸಿದರು. ಶಾಖಾ ಸಹಪ್ರಬಂಧಕ ಪ್ರವೀಣ್ ಸ್ವಾಗತಿಸಿದರು. ಸಂಜೀವ ವಂದಿಸಿದರು. ಸೌರಭ ರಾವ್ ಕಾರ್ಯಕ್ರಮ ನಿರೂಪಿಸಿದರು.
26 ಮಂದಿ ಕರಸೇವಕರಿಗೆ ಸನ್ಮಾನ
ಅಯೋಧ್ಯೆ ಕರಸೇವೆಯಲ್ಲಿ ಭಾಗವಹಸಿದ 26 ಮಂದಿ ಕರಸೇವಕರನ್ನು ಮುಳಿಯ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಅವರಿಗೆ ಕೇಸರಿ ಶಲ್ಯ, ಹಾರ, ಫಲಪುಷ್ಪ, ಅಯೋಧ್ಯೆ ಶ್ರೀ ರಾಮಮಂದಿರದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿ, ಕೃಷ್ಣನಾರಾಯಣ ಮುಳಿಯ ಮತ್ತು ಅಶ್ವಿನಿಕೃಷ್ಣ ಮುಳಿಯ ದಂಪತಿ, ಕರಸೇವಕರಿಗೆ ತಿಲಕವಿಟ್ಟು, ಕಲಶದ ತೀರ್ಥ ನೀಡಿದರು. ಕರಸೇವಕರಾದ ಕೋಂಕೋಡಿ ಪದ್ಮನಾಭ ಭಟ್ ದಂಪತಿ, ಬಾಲಕೃಷ್ಣ ರೈ, ಶೀನಪ್ಪ ಪೂಜಾರಿ, ಶಿವರಾಮ ಬನ್ನೂರು, ಸೋಮಪ್ಪ ಗೌಡ ಬನ್ನೂರು, ಸುರೇಂದ್ರ ಆಚಾರ್ಯ, ಕುಟ್ಡಿಯಣ್ಣ, ಧನಂಜಯ ವಾಗ್ಲೆ, ಗಣೇಶ್ ಭಟ್, ನಾರಾಯಣ ಆಚಾರ್ಯ, ರಾಧಾಕೃಷ್ಣ, ಗೋಪಾಲಕೃಷ್ಣ ರೈ, ರವಿ ರಾಮಕುಂಜ, ಗಂಗಾಧರ ಪಂಡಿತ್, ಸುಬ್ರಹ್ಮಣ್ಯ ಭಟ್ ದರ್ಬೆ, ಪಾರ್ವತಿ ಸುಬ್ರಹ್ಮಣ್ಯ ಭಟ್ ದರ್ಬೆ, ನಾಗೇಶ್ ಶೆಣೈ, ರಾಧಾಕೃಷ್ಣ ಎನ್ ಸುಳ್ಯ, ಕೇಶವ ಸುವರ್ಣ, ರಾಮಚಂದ್ರ ಬೆಳ್ಳಿಪ್ಪಾಡಿ, ಸುರೇಶ್ ಭಟ್, ಜಯರಾಮ್, ರಾಜೇಶ್ ಬನ್ನೂರು, ಯೋಗೀಶ್ ಭಕ್ತ, ವಿಶ್ವನಾಥ್ ಬೇರಿಕೆ, ಶೇಖರ್ ನಾರಾವಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಮೇಶ್ ಆಚಾರ್ಯ, ಜಯಾನಂದ, ಪಿ.ಜಿ.ಚಂದ್ರಶೇಖರ್ ರಾವ್ ಸಹಿತ ಹಲವಾರು ಮಂದಿ ಕರಸೇವಕರನ್ನು ಗೌರವಿಸಲಾಯಿತು. ಶಿವಪ್ರಸಾದ್ ಅವರು ಸನ್ಮಾನಿತರನ್ನು ಪರಿಚಯಿಸಿದರು.