ಎಸ್‌ಆರ್‌ಕೆ ಲ್ಯಾಡರ್‍ಸ್‌ನ ರಜತ ಸಂಭ್ರಮದ ಸಮಾರೋಪಕ್ಕೆ ಭರದ ಸಿದ್ಧತೆ – 24 ಸಾವಿರ ಚದರ ಅಡಿ ವಿಸ್ತೀರ್ಣದ ಮೈದಾನ ಸಮತಟ್ಟು

0

ಪುತ್ತೂರು: ಪುತ್ತೂರಿನ ಎಸ್.ಆರ್ ಕೆ ಲ್ಯಾಡರ್ಸ್ ರಜತ ಸಂಭ್ರಮಾಚರಣೆ ಅಂಗವಾಗಿ ಮೇ.25ರಂದು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ 24 ಸಾವಿರ ಚದರ ಅಡಿ ವಿಸ್ತೀರ್ಣದ ಮೈದಾನ ಸಮತಟ್ಟು ಕಾರ್ಯಗಳು ಭರದಿಂದ ನಡೆಯುತ್ತಿದೆ.
ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯುವ ಈ ಸಮಾರೋಪ ಕಾರ್ಯಕ್ರಮ ದಿನಪೂರ್ತಿ ನಡೆಯಲಿದ್ದು, ಸುಮಾರು 3600 ಚದರ ಅಡಿ ವಿಸ್ತೀರ್ಣದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ, ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಒಟ್ಟು ಕಾರ್ಯಕ್ರಮದ ದೃಷ್ಟಿಯಿಂದ ಸಹಸ್ರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿಂದ ಈಗಾಗಲೇ ಜೆಸಿಬಿಯಿಂದ ಮೈದಾನದ ಸಮತಟ್ಟು ಕೆಲಸವನ್ನು ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here