ಕಾಣಿಯೂರು: ಕುದ್ಮಾರು ಕೂರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ ವಹಿಸಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ನವ್ಯಾ ಅನ್ಯಾಡಿ ಉದ್ಘಾಟಿಸಿದರು. ಕುದ್ಮಾರು ಶಾಲಾ ಮುಖ್ಯಗುರು ಕುಶಾಲಪ್ಪ, ಬೆಳಂದೂರು ಗ್ರಾ.ಪಂ. ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರವೀಣ್ ಕೆರೆನಾರು, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಮಹಿಳಾ ಮಂಡಲದ ಕಾರ್ಯದರ್ಶಿ ರಾಧಾ ಹಾಗೂ ಕುದ್ಮಾರು ಮಹಿಳಾ ಮಂಡಲದ ಸದಸ್ಯರು, ಕುದ್ಮಾರು ಝಾನ್ಸಿ ಯುವತಿ ಮಂಡಲದ ಸದಸ್ಯರು, ಪೋಷಕರು, ವಿದ್ಯಾರ್ಥಿಗಲು ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಿವ್ಯ, ನವ್ಯಾ ಪ್ರಾರ್ಥಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಸಂತಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಲಲಿತಾ ಸಹಕರಿಸಿದರು.
![](https://puttur.suddinews.com/wp-content/uploads/2024/03/1-5.jpg)
ಸನ್ಮಾನ ಈ ಸಂದರ್ಭದಲ್ಲಿ ಕುದ್ಮಾರು ಮಹಿಳಾ ಮಂಡಲದ ಅಧ್ಯಕ್ಷರಾಗಿ, ತಾಲೂಕು ಮಹಿಳಾ ಮಂಡಲದ ಅಧ್ಯಕ್ಷರಾಗಿ, ಬೆಳಂದೂರು ಗ್ರಾ. ಪಂ. ಅಧ್ಯಕ್ಷರಾಗಿ, ಕುದ್ಮಾರು ಝಾನ್ಸಿ ಯುವತಿ ಮಂಡಲದ ಗೌರವಾಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಸುಗುಣ ಭಟ್ ಬರೆಪ್ಪಾಡಿ ಇವರನ್ನು ಸನ್ಮಾನಿಸಲಾಯಿತು.
![](https://puttur.suddinews.com/wp-content/uploads/2024/03/53256a93-527c-4d71-b0f7-6b4284aaf597.jpg)