ಬುಳೇರಿಕಟ್ಟೆ-ಬಳಕ್ಕ ಬಂಗೇರ ತರವಾಡು ಮನೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ ಆರಂಭ

0

ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಅಗರ್ತಬೈಲು ಬಳಕ್ಕ ಬಂಗೇರ ಕುಟುಂಬದ ತರವಾಡು ಮನೆಯ ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠಾ ದಿನಾಚರಣೆ ಹಾಗೂ ದೈವಗಳ ವಾರ್ಷಿಕ ನೇಮೋತ್ಸವ ಮಾ.15 ರಿಂದ 17ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಮಾ.15ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಪುರೋಹಿತ್ಯದಲ್ಲಿ ಮಹಾಗಣಪತಿ ಹೋಮ, ನಾಗತಂಬಿಲ, ವೆಂಕಟ್ರಮಣ ದೇವರ ಹರಿಸೇವೆ, ದೈವಗಳಿಗೆ ತಂಬಿಲ ಸೇವೆ ನಡೆದು ಸತ್ಯನಾರಾಯಣ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಸಾಯಂಕಾಲ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಕೊರತಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಹಾಗೂ ರಾಹುಗುಳಿಗ ನೇಮೊತ್ಸವ‌ ನಡೆಯಿತು. ಇಂದು ಮಾ.16ರಂದು ಸಾಯಂಕಾಲ ದೈವಗಳ ಭಂಡಾರ ತೆಗೆದು ಅನ್ನ ಸಂತರ್ಪಣೆ ನಡೆದು ಸತ್ಯದೇವತೆ, ವರ್ಣರ ಪಂಜುರ್ಲಿ, ಕಲಾಲ್ತಗುಳಿಗ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here