ಪುತ್ತೂರು ಮೋಡರ್ನ್ ಹೇರ್‌ಡ್ರೆಸಸ್‌ನ ಮಾಲಕ ಸುರೇಂದ್ರ ಭಂಡಾರಿ ನಿಧನ

0

ಪುತ್ತೂರು: ಪುತ್ತೂರು ದಿನೇಶ್ ಭವನ ಕಟ್ಟಡದಲ್ಲಿರುವ ಮೋಡರ್ನ್ ಹೇರ್‌ಡ್ರೆಸಸ್‌ನ ಮಾಲಕ ಸುರೇಂದ್ರ ಭಂಡಾರಿ(66ವ)ರವರು ಮಾ.16ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಪುತೂರಿನಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೋಡರ್ನ್ ಹೇರ್‌ಡ್ರೆಸಸ್ ಮೂಲಕ ಚಿರಪರಿಚಿತರಾಗಿದ್ದ ಸುರೇಂದ್ರ ಭಂಡಾರಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ಪಡ್ಡಾಯೂರು ನೀರ್ತಾಡಿ ಮೂಲದ ಸುರೇಂದ್ರ ಅವರು ಪುತ್ತೂರು ಮಹಿಳಾ ಪದವಿ ಕಾಲೇಜಿನ ಬಳಿಯ ಚೆನ್ನಿಗಾರ್ ಎಂಬಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ ಸುಮಲತಾ, ಪುತ್ರಿ ಶ್ರುತಿಕಾ, ಪುತ್ರ ಲತೇಶ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here