ಆಲಂಕಾರು ಇಡಾಳ ಕಿ. ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷ ಬಾಲಕೃಷ್ಣ ಗೌಡ, ಕಾರ್ಯದರ್ಶಿ ಶಿವಪ್ರಸಾದ್

ಪುತ್ತೂರು: ಆಲಂಕಾರು ಇಡಾಳ ಕಿ.ಪ್ರಾ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ನಡುಮನೆ ಇಡಾಳ ಹಾಗೂ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೆದ್ದೊಟ್ಟೆ ಆಯ್ಕೆಯಾಗಿದ್ದಾರೆ.


ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಐ. ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ ಲೋಕೇಶ್ ಇಡಾಳ ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಐ., ಜೊತೆ ಕಾರ್ಯದರ್ಶಿಯಾಗಿ ಕೇಶವ ಇಡಾಳ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರದ್ಧಾ ಐ.ಎಸ್., ಸೌಮ್ಯ ಐ., ಕ್ರೀಡಾ ಕಾರ್ಯದರ್ಶಿಯಾಗಿ ದೀಕ್ಷಿತ್ ಐ. ಸದಸ್ಯರಾಗಿ ಚಂದ್ರಶೇಖರ ಐ., ವಿಶ್ವನಾಥ ಗೌಡ ಇಡಾಳ, ನವೀನ ಐ., ಭಾಸ್ಕರ ಗೌಡ ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ರಚನಾ ಪ್ರಕ್ರಿಯೆಯನ್ನು ಶಾಲಾ ಮುಖ್ಯ ಶಿಕ್ಷಕ ಮಹೇಶ ಎನ್. ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here