ಪುತ್ತೂರು: ಪುರುಷರಕಟ್ಟೆ ಶಿವಕೃಪ ಕಟ್ಟಡದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಸವಣೂರು ಅಶ್ವಿನಿ ಕಾಂಪ್ಲೆಕ್ಸ್ನಲ್ಲಿ ಶಾಖೆಯನ್ನು ಹೊಂದಿರುವ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ವಿಶೇಷ ಆಫರ್ಗಳ ಉಡುಗೊರೆಯನ್ನು ಕಲ್ಪಿಸಿಕೊಟ್ಟಿದೆ.
ನಿರಖು ಠೇವಣಿಗಳ ಮೇಲಿನ ಬಡ್ಡಿದರದಲ್ಲಿ 45ದಿನಗಳಿಗೆ ಶೇ.5,90 ದಿನಗಳಿಗೆ ಶೇ. 6,180 ದಿನಗಳಿಗೆ ಶೇ.7, ಒಂದು ವರ್ಷಕ್ಕೆ ಶೇ. 9.75, ಹಿರಿಯ ನಾಗರಿಕರು, ಮಾಜಿ ಸೈನಿಕರು, ಸಂಘ-ಸಂಸ್ಥೆಗಳಿಗೆ ಹೆಚ್ಚುವರಿ ಶೇ.0.5 ಬಡ್ಡಿದರ(10.25%), ಆವರ್ತ ಠೇವಣಿ(ಆರ್.ಡಿ)ಗಳಾದ 2/3/5 ವರ್ಷದ ಅವಧಿಗೆ ಶೇ.9 ಲಭ್ಯವಿದೆ. ಕಡಿಮೆ ಬಡ್ಡಿ ದರದಲ್ಲಿ ಪಿಗ್ಮಿ ಆಧಾರಿತ ಸಾಲ, ಭೂ ಅಡಮಾನ ಸಾಲ, ವಾಹನ ಖರೀದಿ ಸಾಲ, ವೇತನಾಧಾರಿತ ಸಾಲ, ಮೂರ್ತೆದಾರಿಕೆ ಸಾಲ, ಜಾಮೀನು, ವ್ಯಾಪಾರ ಸಾಲ, ಸ್ವ-ಸಹಾಯ ಗುಂಪುಗಳಿಗೆ ಸಾಲ ಜೊತೆಗೆ ಪ್ರತಿ ಗ್ರಾಂ.ಗೆ ಕನಿಷ್ಟ ಬಡ್ಡಿದರದಲ್ಲಿ ಗರಿಷ್ಟ ಸಾಲ ಸೌಲಭ್ಯದ ಚಿನ್ನಾಭರಣ ಈಡಿನ ಸಾಲಗಳು, ಮಾರ್ಚ್ 31ರ ಅಂತ್ಯಕ್ಕೊಳಗಾಗಿ ಸಂಘದಲ್ಲಿ ಇಡುವ ಶುಭಲಾಭ ನಗದು ಠೇವಣಿಯು 7 ವರ್ಷಕ್ಕೆ ದ್ವಿಗುಣಗೊಳ್ಳುವ ಶುಭ ಲಾಭ ನಗದು ಪತ್ರ ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಇ-ಸ್ಟ್ಯಾಂಪಿಂಗ್(ಠಸ್ಸೆ ಪೇಪರ್) ಸೌಲಭ್ಯ, ಭಾರತದಾದ್ಯಂತ ಎನ್.ಇ.ಎಫ್.ಟಿ, ಆರ್.ಟಿ.ಜಿ.ಎಸ್ ಸೌಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಹಕಾರಿ ಸಂಘದ ನೂತನ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಮುಂಡೋಡಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಶನ್ ಎಂ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.