ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಾ 19ರಿಂದ ಮಾ 26ರವರೆಗೆ ನಡೆಯಲಿರುವ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರವು ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಪ್ರವೀಣ್ ವರ್ಣಕುಟೀರ ಇವರ ನೇತೃತ್ವದಲ್ಲಿ ನಡೆಯಲಿದ್ದು, ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಅವರು ಚಾಲನೆ ನೀಡಿ, ಶುಭ ಹಾರೈಸಿದರು.

ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ , ಸಹ ಆಡಳಿತಾಧಿಕಾರಿ ಹೇಮ ನಾಗೇಶ್ ರೈ ,ಪ್ರವೀಣ್ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಪುತ್ತೂರು ಇವರು ಶುಭ ಹಾರೈಸಿದರು. ಈ ಶಿಬಿರದಲ್ಲಿ ಬಣ್ಣಗಳೊಂದಿಗೆ ಒಂದು ದಿನ ,ಮನೋವಿಕಾಸನ ಆಟಗಳು, ಜನಪದ ನೃತ್ಯ, ಜನಪದ ಹಾಡು, ರಂಗ ಗೀತೆಗಳು ,ರಂಗ ಶಿಕ್ಷಣದ ಮಾಹಿತಿ , ಪೇಪರ್ ಕ್ರಾಫ್ಟ್, ಮುಖವಾಡ ತಯಾರಿ, ಮಾರ್ಬಲ್ ಆರ್ಟ್, ಗ್ರೀಟಿಂಗ್ಸ್ ತಯಾರಿ ,ಚಿತ್ರಕಲೆ, ಲ್ಯಾಂಡ್ ಸ್ಕೇಪ್ ನ ಸೂಕ್ಷ್ಮ ವಿಷಯಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ, ಡೆಕೋಪೇಜ್ ಆರ್ಟ್ ,ಆಟದೊಂದಿಗೆ ಪಾಠ, ನಾಟಕ ಮುಂತಾದ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರವೀಣ್ ವರ್ಣ ಕುಟೀರ ಪುತ್ತೂರು ,ಸುಷ್ಮಾ ಸಿ ಜೆ ಹೊನ್ನಳ್ಳಿ ದಾವಣಗೆರೆ, ದರ್ಶನ್ ನಿನಾಸಂ, ಪ್ರಸನ್ನ ಕುಮಾರ್ ಟಿ ಬಿ ಕೊಡಗು, ಎಂ ಎಸ್ ಪುರುಷೋತ್ತಮ್ ಸುಳ್ಯ ಇವರು ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಹಿರಿಯ ಶಿಕ್ಷಕಿಯರಾದ ಸವಿತಾ, ಜಯಶೀಲ ಮತ್ತು ನಾರಾಯಣ ಭಟ್ ಉಪಸ್ಥಿತರಿದ್ದರು.


ಮುಖ್ಯಗುರು ಸರಸ್ವತಿ ಎಂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ರಾಶಿ ಕೆ ಸಿ ಪ್ರಾರ್ಥಿಸಿದರು. ಶಿಕ್ಷಕಿ ವಿನಯ ವಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನಿತಾ ಜೆ ರೈ ವಂದಿಸಿದರು.

LEAVE A REPLY

Please enter your comment!
Please enter your name here