ಉಪ್ಪಿನಂಗಡಿ: ಹಾಲು ಉತ್ಪಾದಕರ ಸಂಘದಿಂದ ಕಳವು

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ.20ರಂದು ಬೆಳಕಿಗೆ ಬಂದಿದೆ.
ಮಾ.19ರ ಸಂಜೆ ಕೆಲಸ ಮುಗಿದ ಬಳಿಕ ಸಂಘದ ಕಚೇರಿಯನ್ನು ಬಂದ್ ಮಾಡಿ ಸಿಬ್ಬಂದಿಯು ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದು ಬೆಳಕಿಗೆ ಬಂದಿದೆ. ಒಳ ನುಗ್ಗಿದ ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದಿದ್ದು, ಅದರಲ್ಲಿದ್ದ ಸುಮಾರು ಒಂದೂವರೆ ಸಾವಿರದಷ್ಟು ಹಣವನ್ನು ಎಗರಿಸಿ, ಪರಾರಿಯಾಗಿದ್ದಾನೆ. ಸ್ಥಳೀಯ ಮನೆಯೊಂದರಿಂದ ಪಿಕ್ಕಾಸೊಂದನ್ನು ತಂದು ಈತ ಷಟರ್‌ನ ಬೀಗ ಮುರಿಯಲು ಬಳಸಿದ್ದ ಎಂದು ತಿಳಿದು ಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ ಈತನ ಚಲನವಲನಗಳು ಸಂಘದ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿವೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here