ಅಂತಾರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಪ್ತ ಚಂದ್ರಮತಿ ಮುಳಿಯ

0

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ( ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿ ಪುತ್ರಿ ) ಆಫ್ರಿಕಾದ ಟುನಿಷಿಯದ “ಟುನಿಷಿಯ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ & ಟೆಕ್ನಾಲಜಿ ( ATAST – Tunisia Association for the future of Science & Technology)” ಇವರಿಂದ ನಡೆಸಲ್ಪಡುವ I-FEST² ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದಾರೆ.

“ಕಿಡ್ಡಿ ಸೇಫ್ ಕನೆಕ್ಟ್ (Kiddi Safe Connect )” ಎಂಬ ಯೋಜನೆಯನ್ನು ಮಾ.22 ರಿಂದ 28 ರ ವರೆಗೆ ಆಫ್ರಿಕಾದ ಟುನಿಷಿಯದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಮಂಡಿಸಲಿದ್ದಾರೆ. ಇವರಿಗೆ ವಿವೇಕಾನಂದ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಪ್ರಯೋಗಾಲಯದ ಬೋಧಕ ವೆಂಕಟೇಶ್ ಮತ್ತು ಮಂಗಳೂರಿನ ಟೆಕ್ನೋಮಸ್ ಸಂಸ್ಥೆಯ ಸ್ಥಾಪಕ ಅಶ್ವಿನ್ ಕಲ್ಲಾಜೆ ಹಾಗೂ ಶಾಲಾ ವಿಜ್ಞಾನ ಶಿಕ್ಷಕಿ ರಂಜಿತ ಇವರು ಮಾರ್ಗದರ್ಶನ ನೀಡಿದ್ದಾರೆ.

ಸ್ಪರ್ಧೆಗೆ ನಿರ್ಗಮಿಸುತ್ತಿರುವ ವಿದ್ಯಾರ್ಥಿನಿಗೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ, ಸಂಚಾಲಕ ಭರತ್ ಪೈ, ಸದಸ್ಯೆ ಶಂಕರಿ ಶರ್ಮ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಂಧು ವಿ.ಜಿ, ಬೋಧಕ, ಬೋಧಕೇತರ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here