ಮಾ.23,24,29,31ರ ರಜಾದಿನಗಳಲ್ಲಿ ಮೆಸ್ಕಾಂ ಬಿಲ್ ಪಾವತಿಗೆ ನಗದು ಕೌಂಟರ್ ಓಪನ್

0

ಪುತ್ತೂರು: ಗ್ರಾಹಕರಿಗೆ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಅನುಕೂಲವಾಗುವಂತೆ ಮಾರ್ಚ್ ತಿಂಗಳ ಸಾರ್ವತ್ರಿಕ ರಜಾದಿನಗಳಾದ ಮಾ.23(ನಾಲ್ಕನೇ ಶನಿವಾರ), 24(ಆದಿತ್ಯವಾರ), 29(ಗುಡ್ ಫ್ರೈಡೆ) ಹಾಗೂ 31(ಆದಿತ್ಯವಾರ)ರಂದು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮೆಸ್ಕಾಂನ ಎಲ್ಲಾ ನಗದು ಕೌಂಟರ್‌ಗಳನ್ನು ತೆರೆದಿಡಲು ಕ್ರಮಕೈಗೊಳ್ಳಲಾಗಿದೆ. ಗ್ರಾಹಕರು ಈ ಸೌಲಭ್ಯದ ಸದುಪಯೋಗಪಡಿಸಿಕೊಂಡು ವಿದ್ಯುತ್ ಬಿಲ್‌ಗಳನ್ನು ಪಾವತಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here