ಪುತ್ತೂರು: ಬಿಲ್ಲವ ಸಂಘ ರಿ ಕುಂಡಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಅ. ಯೋಜನೆ ವಿಟ್ಲ ಮುಡ್ನೂರು, ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಹಾಗೂ ಗುರುಸ್ಮೃತಿ ಚಾರಿಟೇಬಲ್ ಟ್ರಸ್ಟ್ ಕುಂಡಡ್ಕ ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸುಮಾರು 15 ದಿನಗಳವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿ ಶಿಬಿರ ಇದರ ಉದ್ಘಾಟನಾ ಕಾರ್ಯಕ್ರಮ ಮಾ. 22 ರಂದು ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ಪ್ರಾರಂಭಗೊಂಡಿತು.
ಉದ್ಘಾಟನೆಯನ್ನು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರ್ ಭಟ್ ಪೆರುವಾಜೆ ನೆರವೇರಿಸಿ, ಶುಭ ಹಾರೈಸಿದರು. ಕುಂಡಡ್ಕ ಗುರುಸ್ಮೃತಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಬಗ್ಗೆ ಮಾಹಿತಿಯನ್ನು ನೆಮ್ಮದಿ ವೆಲ್‌ನೆಸ್ ಸೆಂಟರ್ ಕಲ್ಲಾರೆ ಇದರ ಮುಖ್ಯಸ್ಥರಾಗಿರುವ ಕೆ. ಪ್ರಭಾಕರ ಸಾಲ್ಯಾನ್ ನೀಡಿದರು.
ಮುಖ್ಯ ಅತಿಥಿಗಳಾಗಿ ಕುಂಡಡ್ಕ ಬಿಲ್ಲವ ಸಂಘದ ಅಧ್ಯಕ್ಷ ದೂಮಪ್ಪ ಪೂಜಾರಿ, ಕುಂಡಡ್ಕ ಹಾಲು ಉತ್ಪಾದಕರ ಸೇವ ಸಂಘದ ಅಧ್ಯಕ್ಷ ಜಯಪ್ರಕಾಶ್ ನಾಯಕ್, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯತೀಶ್ ಪೂಜಾರಿ ಬೇರಿಕೆ ಹಾಗೂ ಕುಂಡಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ಸುಂದರ ಪೂಜಾರಿ, ಧ.ಗ್ರಾ.ಅ.ಯೋ. ಸಮನ್ವಯ ಅಧಿಕಾರಿ ಸರಿತಾ ಮತ್ತು ಕೃಷಿಕ ಚೇತನ್ ಪೂಜಾರಿ ಮರುವಾಳ ಹಾಜರಿದ್ದರು. ಆ ಬಳಿಕ ಥೆರಪಿ ಕಾರ್ಯಕ್ರಮ ಪ್ರಾರಂಭಗೊಂಡಿತ್ತು. ಸಾರ್ವಜನಿಕರು ಈ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ, ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ವಿನಂತಿಸಿದರು.