ಕರ್ನಾಟಕದಲ್ಲಿ ಸಿನ್ಸಿಯಾರಿಟಿ, ಹಾನೆಸ್ಟಿ ಪದಗಳಿಗೆ ಅರ್ಥ ಕಳೆದು ಕೊಳ್ಳುವ ರಾಜನೀತಿಯಿದೆ – ಚುನಾವಣೆಯ ತನಕ ಆ ನೋವನ್ನು ನುಂಗಿಕೊಂಡು ಕರ್ನಾಟಕದಲ್ಲಿ ಬಿಜೆಪಿಗಾಗಿ ಹೋರಾಟ – ಡಿ.ವಿ.ಎಸ್

0

*ನರೇಂದ್ರ ಮೋದಿಯವರು ದೈವಾಂಶಸಂಭೂತರು
*ರಾಜಕಾರಣದಿಂದಲ್ಲ ಚುನಾವಣಾ ರಾಜಕಾರಣದಿಂದ ದೂರ ಉಳಿದು ಪಕ್ಷದ ಕೆಲಸ ಕಾರ್ಯ
*ಸ್ವಾರ್ಥ ರಾಜಕಾರಣ ಮಾಡುವಂತರವರಿಗೆ ನಾವು ಮನೆ ಹಾಕುವುದಿಲ್ಲ
*ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿಗೆ ಗುಂಪಿಗೆ ಗೌರವ ಸಿಕ್ಕಿಲ್ಲ
*ಎಷ್ಟೋ ಜನ ಪಾಪಾ ಮಾಡಿದ ಬಳಿಕ ತೀರ್ಥಯಾತ್ರೆಗೆ ಹೋದಂತೆ ಮತ್ತೆ ಪಕ್ಷಕ್ಕೆ ಸೇರ್ಪಡೆ

ಪುತ್ತೂರು: ಇವತ್ತು ಕರ್ನಾಟಕ ರಾಜ್ಯದಲ್ಲಿ ಸಿನ್ಸಿಯಾರಿಟಿ ಮತ್ತು ಹಾನೆಸ್ಟಿ ಹೇಳುವ ಶಬ್ದಗಳಿಗೆ ಒಂದು ರೀತಿಯ ಅರ್ಥ ಕಳೆದು ಕೊಳ್ಳುವ ರಾಜನೀತಿ ಇರುವುದು. ಮನಸ್ಸಿಗೆ ನೋವಿನ ಸಂಗತಿ. ಅದಕ್ಕಾಗಿ ಚುನಾವಣೆಯ ತನಕ ಆ ನೋವನ್ನು ನುಂಗಿಕೊಂಡು ಚುನಾವಣೆಯ ನಂತರ ಮೋದಿಯವರ ಬಿಜೆಪಿ ಕರ್ನಾಟಕದಲ್ಲಿ ಬರಬೇಕು. ಅದಕ್ಕಾಗಿ ನಮ್ಮ ಹೋರಾಟವನ್ನು ನಿರಂತರ ಮಾಡುತ್ತೇವೆ ಎಂದು ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದ್ದಾರೆ.
ಮಾ.24ರಂದು ಪುತ್ತೂರಿಗೆ ಭೇಟಿ ನೀಡಿದ ಅವರು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಅವರು ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು. ನನ್ನ ಸಚ್ಯಾರಿತ್ರ್ಯಕ್ಕೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಗುಂಪುಗಾರಿಕೆಯ ರಾಜಕಾರಣ ನಾವು ಮಾಡುವುದಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ವೇಳೆ ಡೆಲ್ಲಿ ಗುಂಪು, ಕರ್ನಾಟಕ ಗುಂಪು ಇತ್ತು. ನಾವೆಲ್ಲ ಬಿಜೆಪಿ ಗುಂಪಿನಲ್ಲಿದ್ದೆವು. ಆದರೆ ಬಿಜೆಪಿ ಗುಂಪಿನವರಿಗೆ ಭಾರಿ ದೊಡ್ಡ ಗೌರವ ಸಿಗಲಿಲ್ಲ. ಜನರು ಕೂಡಾ ಅದನ್ನೇ ಹೇಳಿದ್ದರು. ನಿಮ್ಮ ಗುಂಪುಗಾರಿಕೆಯಿಂದಾಗಿ ನಾವು ಒಟು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇಂತಹ ಗಂಪುಗಾರಿಕೆಯನ್ನು ನಿಲ್ಲಿಸಲು ಶುದ್ದೀಕರಣ ಮುಂದಿನ ಭಾಗವಾಗಿದೆ ಎಂದರು.
ನರೇಂದ್ರ ಮೋದಿವಯವರ ಚುನಾವಣೆಯೊಂದೆ ನಮ್ಮ ಮುಂದಿರುವುದು:
ನರೇಂದ್ರ ಮೋದಿಯವರ ಪರಿಕಲ್ಪಣೆಯ ಸಂಘಟನೆ. ನರೇಂದ್ರ ಮೋದಿಯ ಯಾವ ರೀತಿಯಲ್ಲಿ ಕಳೆದ 10 ವರ್ಷದಲ್ಲಿ ಕಂಡೊಯ್ಯುದ್ದಿದ್ದಾರೋ ಅದನ್ನು ಮುಂದುವರಿಸಿಕೊಂಡು ಎಲ್ಲಾ ಕಡೆ ಹೋಗಬೇಕು. ಕೇವಲ ನರೇಂದ್ರ ಮೋದಿಯವರಿಗೆ ಮಾತ್ರ ಸೀಮಿತವಲ್ಲ. ಅವರು ಡೆಲ್ಲಿಯಲ್ಲಿ ಮಾತ್ರ ಸೀಮಿತವಾದರೆ ಆಗುವುದಿಲ್ಲ. ಅವರು ಎಲ್ಲಾ ರಾಜ್ಯಗಳಲ್ಲಿ ಕೂಡಾ ಅದು ಹೋಗಬೇಕು
ಅವರು ಹೇಳಿದಂತೆ ಪರಿವಾರ ವಾದದಿಂದ ಮುಕ್ತರಾಗಬೇಕು. ಭ್ರಷ್ಟಾಚಾರದಿಂದ ಮುಕ್ತರಾಗಬೇಕು ಮತ್ತು ಜಾತಿ ವಾದದಿಂದ ಮುಕ್ತವಾಗುವ ರಾಜ್ಯ ನೀತಿ ಇರಬೇಕು. ಈ ಚುನಾವಣೆ ಕಳೆದ ಬಳಿಕ ರಾಜ್ಯದಲ್ಲಿರುವ ಪಕ್ಷದಲ್ಲಿ ಎಲ್ಲವನ್ನು ಪಡೆದು ಕೊಂಡವರು ನಾವೆಲ್ಲ ಇದ್ದೇವೆ. ನಾವೆಲ್ಲ ಸೇರಿ ಕಂಡಿತ ಮುಂದೆ ಶುದ್ದೀಕರಣ ಮಾಡುವ ಕೆಲಸ ಮಾಡುತ್ತೇವೆ. ಈಗ ನರೇಂದ್ರ ಮೋದಿಯವರ ಚುನಾವಣೆ ಒಂದೇ ನಮ್ಮ ಮುಂದಿರುವುದು. ಚುನಾವಣೆಯ ಹಿನ್ನೆಲೆಯಲ್ಲಿ ಅವರ ಪರಿಕಲ್ಪಣೆ ಭಾರತ ಕಟ್ಟಲು ಅದಕ್ಕೆ ನಮ್ಮ ಭಾಗದಿಂದಲೂ ಕಳುಹಿಸಿಕೊಡಬೇಕು. ಹಗಾಗಿ ಸಣ್ಣಪುಟ್ಟ ವಿಚಾರವನ್ನು ಯಾರು ಕೂಡಾ ಮನಸ್ಸಿಗೆ ಹಾಕಿಕೊಳ್ಳಬಾರದು ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ಕೆಳಗಿನ ಹಂತದಲ್ಲಿ ಶುದ್ದೀಕರಣ ನಮ್ಮ ಜವಾಬ್ದಾರಿ:
ನಾನು ಮುಂದಿನ ನಡೆದಯ ಬಗ್ಗೆ ಪಕ್ಷ ನನಗೆ ಎಲ್ಲ ಕೊಟ್ಟಿದೆ. ಪಕ್ಷಕ್ಕೆ ನಾನು ಕೊಡಬೇಕಾಗಿದೆ. ವಿಶೇಷವಾಗಿ ದೈವಾತ ಸಂಬೂತ ನರೇಂದ್ರ ಮೋದಿಯವರು ಬಂದ ಕಾರಣ ಎಷ್ಟು ದಿನ ದೇಶದ ಶುದ್ದೀಕರಣ ಮಾಡಬೇಕು ಎಂಬುದು ಮುಂದಿದೆ. ಅದನ್ನು ಕೆಳಗಿನ ಹಂತದಲ್ಲಿ ಕೊಂಡುಹೋಗುವ ಜವಾಬ್ದಾರಿ ನಮ್ಮದು ಅದನ್ನು ನಾವು ಮಾಡುವ ಕೆಲಸ ಕಾರ್ಯ ಮಾಡುತ್ತೇನೆ.
ಚುನಾವಣೆ ರಾಜಕೀಯದಲ್ಲಿ 30 ವರ್ಷ ಆಗಿದೆ. ರಾಜ್ಯದಲಿರುವ ನನ್ನ ಪ್ರಮುಖರು ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ಹೇಳಿದ ಕಾರಣ ನಾನು ಮತ್ತೆ ಮುಂದೆ ಬಂದಿದ್ದೇನೆ. ಹಾಗಾಗಿ ಶುದ್ದೀರಣವೇ ಮುಂದಿನ ಭಾಗ. ಎಷ್ಟೋ ಜನ ಪಾಪ ಮಾಡಿದ ಬಳಿಕ ತೀರ್ಥಯಾತ್ರೆಗೆ ಹೋಗುತ್ತಾರೆ. ಅರ್ಜುನ ಕೂಡಾ ತೀರ್ಥ ಯಾತ್ರೆಗೆ ಹೋಗಿರುವುದನ್ನು ಕಂಡಿದ್ದೀರಿ. ಹಾಗಾಗಿ ಅವರೆಲ್ಲ ಶುದ್ದೀಕರಣ ಆದ ಬಳಿಕ ನಮ್ಮಲ್ಲಿ ಇರಬಹುದು. ನಾನು ಯಾರ ವೈಯುಕ್ತಿಕವಾಗಿ ಮಾತನಾಡುವುದಿಲ್ಲ. ನಮ್ಮ ಪಕ್ಷಕ್ಕೆ 17 ಮಂದಿ ಸೇರಿದರು. 14 ಮಂದಿಯನ್ನು ಮಂತ್ರಿ ಮಾಡಿದ್ದೇವು. ಅವರೆಲ್ಲ ಕಾಂಗ್ರೆಸ್ ಜೆಡಿಎಸ್‌ನಲ್ಲಿದ್ದವರು. ಇವತ್ತು ಪಕ್ಷದಲ್ಲಿ ಬೇರೆ ಬೇರೆ ಭಾಗದಲ್ಲಿ ಮೋದಿಯವರು ಪ್ರಧಾನಿಯಾಗಬೇಕೆಂದು ಹೇಳಿ ಎಲ್ಲಾ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ ಸ್ವಾರ್ಥ ರಾಜಕಾರಣ ಮಾಡುವಂತರವರಿಗೆ ನಾವು ಮನೆ ಹಾಕುವುದಿಲ್ಲ. ಹಾಗೆಂದು ನನ್ನ ಪಕ್ಷದ ಬಗ್ಗೆ ಹಾರಿಕೆ ಸುದ್ದಿ ಹರಡುವವನು ದೇಶ ದ್ರೋಹಿಗಳು ಎಂದು ಡಿ.ವಿ.ಎಸ್ ಹೇಳಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ನಗರ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ದರ್ಣಪ್ಪ ಗೌಡ, ಪವನ್ ಕುಮಾರ್ ಉಪಸ್ಥಿತರಿದ್ದರು.

ಪಕ್ಷದ ಜೊತೆ ಕೆಲಸ ಮಾಡಲು ಶಕ್ತಿಗಾಗಿ ಮಹಾಲಿಂಗೇಶ್ವರನಲ್ಲಿಗೆ ಬಂದಿದ್ದೇನೆ
ಸುಮಾರು 30 ವರ್ಷಗಳ ಕಾಲ ಸುದೀರ್ಘವಾದ ರಾಜಕಾರಣದಲ್ಲಿ ರಾಜ್ಯ, ರಾಷ್ಟ್ರ ಎಲ್ಲಾ ಕಡೆಗಳಲ್ಲೂ ಕೆಲಸ ಮಾಡುವ ಅವಕಾಶ ಮಹಾಲಿಂಗೇಶ್ವರ ಕೊಟ್ಟಿದ್ದಾನೆ.
ಇವತ್ತು 30 ವರ್ಷಗಳು ಕಳೆದ ಬಳಿಕ ದೇವರಿಗೆ ಭಕ್ತಿಯ ನಮನ ಸಲ್ಲಿಸಬೇಕೆಂದು ಮನಸ್ಸಿನಲ್ಲಿರುವ ಭಾವನೆ ಅದಕ್ಕಾಗಿ ಒಂದು ಹಂತದ ರಾಜಕಾರಣದ ವ್ಯವಸ್ಥೆ ಮುಂದೆ ಹೋಗುತ್ತಿರುವ ಸಂದರ್ಭದಲ್ಲಿ ರಾಜಕಾರಣದಿಂದ ದೂರ ಉಳಿಯದೇ, ಚುನಾವಣಾ ರಾಜಕೀಯದಿಂದ ದೂರ ಉಳಿದು, ನನಗೆ ಎನೆಲ್ಲ ಕೊಟ್ಟಿದೆಯೋ ಆ ಪಕ್ಷದ ಜೊತೆ ನಿರಂತರವಾದ ಕೆಲಸ ಕಾರ್ಯಗಳನ್ನು ಮಡಲು ಮತ್ತು ಒಂದಷ್ಟು ಶಕ್ತಿ ಕೊಡು ಎಂದು ಮಹಾಲಿಂಗೇಶ್ವರನಲ್ಲಿ ಪ್ರಾರ್ಥನೆ ಮಾಡಲು ನಾನಿವತ್ತು ಬಂದಿದ್ದೇನೆ. ಬೇರೆನು ವಿಶೇಷವಿಲ್ಲ. ನನ್ನ ಮನೆಯಲ್ಲಿ ಎ.9 ಮತ್ತು 10ಕ್ಕೆ ನಡೆಯುವ ದೊಡ್ಡ ಕಾರ್ಯಕ್ರಮ ಟ್ರಸ್ಟ್‌ನಿಂದ ನೀಡಿದ ಕಲ್ಯಾಣ ಮಂಟಪದ ಕೆಲಸ ಕಾರ್ಯ ನೋಡಿಕೊಂಡು ಸಭೆಯಲ್ಲಿ ಭಾಗವಹಿಸಲಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಮಿತ್ರ ರಾಜೇಶ್ ಮತ್ತು ಧರ್ಣಪ್ಪರ ಜೊತೆಯಲ್ಲಿ ಯಾರಿಗೂ ಹೇಳ್ಬೇಡಿ ಎಂದು ಹೇಳಿದ್ದೆ. ದೇವರ ಆಶೀರ್ವಾದ ಕೇಳಲು ಬಂದಿದ್ದೆನೆ ಬೇರೆನು ವಿಶೇಷ ಇಲ್ಲ.
ಡಿ.ವಿ.ಸದಾನಂದ ಗೌಡ ಮಾಜಿ ಮುಖ್ಯಮಂತ್ರಿ

LEAVE A REPLY

Please enter your comment!
Please enter your name here