ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ, ನಿರಾಶವಾದಿಗಳಾಗಬೇಡಿ-ಡಾ.ಮೋಹನ್ ಆಳ್ವ
ಪುತ್ತೂರು: ಉತ್ತಮವಾಗಿ ಕಲಿಯಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕು, ಸಮಾಜದಲ್ಲಿ ಒಳ್ಳೆಯ ಜೀವನ ನಡೆಸಬೇಕೆನ್ನುವುದು ಎಲ್ಲಾ ವಿದ್ಯಾರ್ಥಿಗಳ ಅಪೇಕ್ಷೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಮಾಜದಲ್ಲಿ ಸ್ಪರ್ಧಾಳುಗಳಾಗಿ ಸವಾಲುಗಳನ್ನು ಎದುರಿಸುವವರಾಗಬೇಕೇ ವಿನಹ ನಿರಾಶವಾದಿಗಳಾಗಬಾರದು, ಪಲಾಯನಗೈಯಬಾರದು ಎಂದು ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನಲ್ ವಿದ್ಯಾಸಂಸ್ಥೆಯ ಚೇರ್ ಮ್ಯಾನ್ ಡಾ.ಮೋಹನ್ ಆಳ್ವರವರು ಹೇಳಿದರು.
ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಇದರ ವಾರ್ಷಿಕೋತ್ಸವ “ಅಕ್ಷಯ ವೈಭವ” ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಬಳಿಕ ಉದ್ಯೋಗ ದೊರಕಿಸಿಕೊಡಬೇಕು ಎನ್ನುವುದು ಸಂಸ್ಥೆಯ ಉದ್ದೇಶ-ಜಯಂತ್ ನಡುಬೈಲು:
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೆತ್ತವರು ಕಣ್ತುಂಬಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯತೆ. ವಿದ್ಯಾರ್ಥಿಗಳು ವಿದ್ಯೆ ಕಲಿತ ಮೇಲೆ ಅವರಿಗೆ ಉದ್ಯೋಗ ದೊರಕಿಸಿಕೊಡಬೇಕು ಎನ್ನುವುದು ಸಂಸ್ಥೆಯ ಉದ್ದೇಶವಾಗಿದೆ. ಹಿಂದಿನ ಎರಡು ವರ್ಷಗಳಲ್ಲಿ ಅಕ್ಷಯ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉದ್ಯೋಗವನ್ನು ಪಡೆದುಕೊಂಡಿವುದು ಕಾಲೇಜಿನ ಹೆಗ್ಗಳಿಕೆಯಾಗಿದೆ ಎಂದರು.
ವಿದ್ಯೆ ನಾಶವಾದರೆ ಅದು ಜೀವಮಾನವಿಡೀ ನಷ್ಟ ಎನಿಸಬಲ್ಲುದು-ಡಾ.ಗೀತಪ್ರಕಾಶ್:
ಲಯನ್ಸ್ ಜಿಲ್ಲೆ 317ಡಿ ಇದರ ಮಾಜಿ ಜಿಲ್ಲಾ ಗವರ್ನರ್ ಹಾಗೂ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ನ ಡಾ.ಗೀತಪ್ರಕಾಶ್ ಮಾತನಾಡಿ, ಒಂದು ದಿವಸ ಅನ್ನ ನಷ್ಟವಾಗಬಹುದು, ಒಂದು ವರ್ಷ ಕೃಷಿ ನಾಶವಾಗಬಹುದು ಆದರೆ ವಿದ್ಯೆ ಎಂಬುದು ನಾಶವಾದರೆ ಅದು ಜೀವಮಾನವಿಡೀ ನಷ್ಟ ಎನಿಸಬಲ್ಲುದು. ವಿದ್ಯಾರ್ಥಿಗಳು ಭವಿಷ್ಯವನ್ನು ಕಂಡುಕೊಳ್ಳಬೇಕಾದರೆ ವೈಯಕ್ತಿಕ ವರ್ಚಸ್ಸು ಹಾಗೂ ಸಂವಹನ ಕೌಶಲ್ಯ ಹೊಂದಿರಬೇಕು. ಮಕ್ಕಳ ಅಭಿರುಚಿಯನ್ನು ಗೌರವಿಸಿ ಅವರನ್ನು ಸಮಾಜದ ಉತ್ತಮ ಸೇವಾಕರ್ತರಾಗಿ ಮಾಡುವಂತಾಗಬೇಕು, ಸಮಾಜದಲ್ಲಿನ ಫಲಾನುಭವಿಗಳನ್ನು ಗುರುತಿಸಿ ನೆರವು ನೀಡುವ ಉತ್ತಮ ಹೃದಯವುಳ್ಳರಾಗಬೇಕು ಎಂದರು.
ವಿದ್ಯಾಭ್ಯಾಸ ಕುಂಠಿತಗೊಂಡರೆ ಸಾಧನೆ ಮಾಡಲು ಅಸಾಧ್ಯ-ಬೂಡಿಯಾರು ರಾಧಾಕೃಷ್ಣ ರೈ:
ಕುಂಬ್ರ ಬೂಡಿಯಾರು ಗ್ಯಾಸ್ ಏಜೆನ್ಸಿಯ ಮಾಲಕ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಆ ಮೂಲಕ ಸಮಾಜಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟುಕೊಳ್ಳಬೇಕು ಎನ್ನುವ ಉದ್ಧೇಶವಿರಬೇಕು. ತನ್ನ ಮಕ್ಕಳ ಪ್ರತಿಭೆಯನ್ನು ಕಣ್ತುಂಬಿಕೊಳ್ಳಲು ಹೆತ್ತವರು ಕಾರ್ಯಕ್ರಮಕ್ಕೆ ಬರಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತಗೊಂಡರೆ ಸಾಧನೆ ಮಾಡಲು ಅಸಾಧ್ಯ ಮಾತ್ರವಲ್ಲ ಜೀವನವೇ ಕುಂಠಿತವಾಗಬಹುದು ಎಂದರು.
ವಿದ್ಯಾರ್ಥಿಗಳು ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಹೆಸರನ್ನು ತಂದುಕೊಡಿ-ವಿನೋದ್ ಕೆ.ಸಿ:
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕೆ.ಸಿ ಮಾತನಾಡಿ, ಕಾಲೇಜು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಗೊಂಡಿವೆ. ಕಾಲೇಜಿನ ಘನತೆಯನ್ನು ಬಾನೆತ್ತರಕ್ಕೆ ಏರಿಸುವುದು ಎಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಹೆಸರನ್ನು ತಂದುಕೊಡಿ ಎಂದರು.
ಅಭಿನಂದನೆ:
ಈ ಸಂದರ್ಭದಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಹೆಸರನ್ನು ಉಪನ್ಯಾಸಕ ಕಿಶೋರ್ ಕುಮಾರ್ ರೈ, ದೀಪ್ತಿ ಹಾಗೂ ರಕ್ಷಣ್ ಟಿ.ಆರ್ ಓದಿದರು.
ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ಸಂಸ್ಥೆಯ ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ್ ನಡುಬೈಲುರವರು ಸ್ವಾಗತಿಸಿದರು. ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಪಿ.ವಿ ನಾರಾಯಣನ್, ಚಿದಾನಂದ ಬೈಲಾಡಿ, ನವೀನ್ ಕೆ.ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ ಕೆ, ರಾಕೇಶ್ ರವರು ಅತಿಥಿಗಳ ಪರಿಚಯ ಮಾಡಿದರು. ವೇದಿಕೆಯಲ್ಲಿ ಕಾಲೇಜು ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಉಪಸ್ಥಿತರಿದ್ದರು. ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಸನ್ಮಾನ
ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದು “ಬೆಸ್ಟ್ ನಿರ್ಗಮಿತ ವಿದ್ಯಾರ್ಥಿ” ಎಂದು ಹೆಸರು ಗಳಿಸಿದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ ವಿಂದ್ಯಾಶ್ರೀರವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮಾ.22 ರಂದು ನಡೆದ ಫ್ಯಾಷನ್ ಶೋ “ಡಿ ವಾಕ್” ಸ್ಪರ್ಧೆಯಲ್ಲಿನ ವಿಜೇತರು.
*ಬೆಸ್ಟ್ ಟೀಚಿಂಗ್ ಅವಾರ್ಡ್-ರಕ್ಷಿತಾ
*ಬೆಸ್ಟ್ ಸೀಕ್ವೆನ್ಸ್ ಅವಾರ್ಡ್-ವಚನ್
*ಬೆಸ್ಟ್ ಕ್ರಿಯೆಟೀವ್ ಟೇಕ್-ಭವ್ಯಶ್ರೀ(ವಿನ್ನರ್), ದಿಶಾ(ರನ್ನರ್)
*ಬೆಸ್ಟ್ ಫೀಮೇಲ್ ಮಾಡೆಲ್: ಶ್ರದ್ಧಾ(ವಿನ್ನರ್),ಭವ್ಯಶ್ರೀ(ರನ್ನರ್)
*ಬೆಸ್ಟ್ ಮೇಲ್ ಮಾಡೆಲ್:ವಚನ್(ವಿನ್ನರ್), ಧೀರೇಶ್(ರನ್ನರ್)
*ಬೆಸ್ಟ್ ಡಿಸೈನರ್: ಶೈಲಶ್ರೀ(ವಿನ್ನರ್), ಶ್ರದ್ಧಾ(ರನ್ನರ್)