ಮಾನವ ಸಾಧನೆಗೆ ಮಿತಿಯಿಲ್ಲ. ಕಠಿಣ ಶ್ರಮ ಮತ್ತು ಬುದ್ಧಿವಂತಿಕೆ ಸೃಜನಶೀಲ ಬದುಕಿಗೆ ದಾರಿಯಾಗುತ್ತದೆ. – ಬಿ. ವಿ ಸೂರ್ಯನಾರಾಯಣ
ಪುತ್ತೂರು:ಮಾನವ ಸಾಧನೆಗೆ ಮಿತಿಯಿಲ್ಲ, ಕಠಿಣ ಶ್ರಮ ಮತ್ತು ಬುದ್ಧಿವಂತಿಕೆ ಸೃಜನಶೀಲ ಬದುಕಿಗೆ ದಾರಿಯಾಗುತ್ತದೆ ಎಂದು ಕೆ ಪಿ ಎಸ್ ಬೆಳ್ಳಾರೆ ಇಲ್ಲಿನ ನಿವೃತ್ತ ಪ್ರಾಚಾರ್ಯ ಬಿ. ವಿ ಸೂರ್ಯನಾರಾಯಣ ನುಡಿದರು.
ಅವರು ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಿಎಂಶ್ರೀ ಹಸಿರು ಶಾಲೆ ಕಾರ್ಯಕ್ರಮದಡಿ ತಜ್ಞರ ಮಾತು ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಕ್ಕಳು ಕನಸ್ಸು ಕಾಣಬೇಕು. ಕನಸ್ಸಿಲ್ಲದ ಮನಸ್ಸು ಯಾವ ಸಾಧನೆಯನ್ನು ಮಾಡದು.ಅದು ಉರಿಯುತ್ತಿರುವ ದೀಪದಂತೆ, ಕನಸ್ಸು ನಮ್ಮ ಸ್ನೇಹಿತನಂತೆ. ನಮ್ಮ ಕನಸ್ಸಿನ ಜೊತೆ ನಾವು ಮಾತನಾಡಬೇಕು. ಆಗ ಕನಸು ನನಸಾಗಲು ಸಾಧ್ಯ ಎಂದರು. ಪೋಷಕರು ಭಾಗವಹಿಸಿ ಸಂವಾದದಲ್ಲಿ ಪಾಲ್ಗೊಂಡರು.ಸಭಾಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ ಇವರು ವಹಿಸಿದ್ದರು.ಎಸ್ ಡಿ ಎಂ ಸಿ ಸದಸ್ಯರಾದ ರತ್ನಾವತಿ,ಪುಷ್ಪ,ಚಿತ್ರಾ, ಪೋಷಕರಾದ ಸುನಂದ, ನೇತ್ರಾವತಿ, ವಿದ್ಯಾ, ವೆಂಕಪ್ಪ ಗೌಡ, ವಾರಿಜ , ಚಂದ್ರಾವತಿ ಉಪಸ್ಥಿತರಿದ್ದರು. ಶಿಕ್ಷಕರಾದ ಹರಿಣಾಕ್ಷಿ, ಶ್ರೀಲತಾ, ಕವಿತಾ, ಹೇಮಾವತಿ,ನಳಿನಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿ, ಶಿಕ್ಷಕಿ ಶೋಬಾ ಕಾರ್ಯಕ್ರಮ ನಿರ್ವಹಿಸಿದರು.