ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೈವಗಳ ಕಟ್ಟೆ ನಿರ್ಮಾಣದ ಭೂಮಿ ಪೂಜೆ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದೊಂದಿಗೆ ಕುಂಟಾರು ಶ್ರೀಧರ ತಂತ್ರಿಯವರು ವೈದಿಕ ವಿಧಿವಿಧಾನ ನೆರವೇರಿಸಿದರು. ಶಿಲ್ಪಿಗಳಾದ ಶ್ರೀ ಬೆದ್ರಡ್ಕ, ರಮೇಶ್ ಕಾರಂತ್ ನೇತೃತ್ವದಲ್ಲಿ ಮಾ.23ರಂದು ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ದೇವಳದ ಪರಿಚಾರಕ ಸುಬ್ರಹ್ಮಣ್ಯ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಮೋಹನ್‌ದಾಸ್ ಶೆಟ್ಟಿ ನೂಜಿಬೈಲು, ದೀಪಕ್ ಕುಮಾರ್ ಮುಂಡ್ಯ, ನಾಗಪ್ಪ ಗೌಡ ಬೊಮ್ಮೆಟ್ಟಿ, ಸುರೇಶ್ ಆಳ್ವ ಸಾಂತ್ಯ, ಆನಂದ ರೈ ಸಾಂತ್ಯ, ವಿಕ್ರಮ್ ರೈ ಸಾಂತ್ಯ, ನಾರಾಯಣ ರೈ ಅಂಕೊತ್ತಿಮಾರ್, ರತನ್ ಕುಮಾರ್ ನಾೖಕ್ ಕರ್ನೂರುಗುತ್ತು, ಪ್ರವೀಣ್ ರೈ ಮೇನಾಲ, ಪ್ರದೀಪ್ ರೈ ಮೇನಾಲ, ಅಚ್ಚುತ ಮಣಿಯಾಣಿ ಸಾಂತ್ಯ, ರಾಮ್‌ಪ್ರಸಾದ್ ಆಳ್ವ ಮೇನಾಲ, ರಾಮ ಮೇನಾಲ, ಸುಭಾಶ್ಚಂದ್ರ ರೈ ಮೈರೋಳು, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಗಿರೀಶ್ ರೈ ಮರಕ್ಕಡ, ಪೂರ್ಣಚಂದ್ರ ನೆಲ್ಲಿತ್ತಡ್ಕ, ದೇವಪ್ಪ ಪೂಜಾರಿ, ಸುರೇಶ್ ಆಳ್ವ, ಸತೀಶ್ ಸುರುಳಿಮೂಲೆ, ಜಯಚಂದ್ರ ಸೇರಾಜೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.