ಉಪ್ಪಿನಂಗಡಿ: ಕಳೆದರಡು ದಿನಗಳಿಂದ ಬೆಳ್ತಂಗಡಿ ತಾಲೂಕಿನ ನೇರೆಂಕಿಮಲೆ ಕಾಡಿನಿಂದ ಕಾಡಾನೆಗಳು ಬಟ್ಲಡ್ಕ ಬಳಿಯ ನೇತ್ರಾವತಿ ನದಿ ಕಿನಾರೆಯತ್ತ ಧಾವಿಸುತ್ತಿದ್ದು, ರೈತರ ಕೃಷಿ ನಾಶದೊಂದಿಗೆ ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.
ಬಂದಾರು ಗ್ರಾಮದ ಬಟ್ಕಡ ಮಸೀದಿ ಬಿ.ಬಿ.ಮಜಲು ಪರಿಸರದಲ್ಲಿ ಸಂಜೆಯಾಗುತ್ತಲೇ ಆನೆಗಳು ಕಾಣಿಸಿಕೊಂಡು ಘೀಳಿಡಲು ಆರಂಭಿಸುತ್ತವೆ. ಬಿ.ಬಿ.ಮಜಲು ತಿಮ್ಮಯ್ಯ ಗೌಡ ಎಂಬವರ ತೋಟದಲ್ಲಿ ಅಡಿಕೆ ತೆಂಗು, ಬಾಳೆಗಿಡಗಳನ್ನು ಆನೆಗಳು ಧ್ವಂಸಗೈದಿದ್ದು, ನಷ್ಟವುಂಟಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ಸಹಿತ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ನಾಗರಿಕರು ರಾತ್ರಿ ಆನೆಗಳು ಘೀಳಿಡುವ ಶಬ್ದ ಕೇಳಿದೊಡನೆ ಒಂದು ಕಡೆ ಜಮಾವಣೆಗೊಂಡು ಆನೆ ಚಲನವಲನ ಬಗ್ಗೆ ನಿಗಾ ಇರಿಸಿದ್ದಾರೆ.