ಅರಿಯಡ್ಕ ಏಳ್ನಾಡುಗುತ್ತು : ಬ್ರಹ್ಮಕಲಶ,ನೇಮದ ಪೂರ್ವಭಾವಿ ಸಭೆ

0

ಪುತ್ತೂರು: ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ,ಧರ್ಮದೈವ ಪಿಲಿಭೂತದ ನೂತನ ದೈವಸ್ಥಾನ ಮತ್ತು ದೊಂಪದ ಬಲಿ ಉತ್ಸವ ನಡೆಯುವಲ್ಲಿ ನವೀಕೃತಕೊಂಡ ಉತ್ಸವಕಟ್ಟೆಗಳು,ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ನಿರ್ಮಿಸಿದ ಗುಳಿಗದೈವದ ಕಟ್ಟೆಯ ಪ್ರತಿಷ್ಠೆ,ಬ್ರಹ್ಮಕಲಶ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನೇಮ ವು ಎ. 21 ರಿಂದ ಎ. 24 ರ ವರೆಗೆ ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ನಡೆಯಲಿದೆ. ಇದರ ಆಂಗವಾಗಿ ಪೂರ್ವಭಾವಿ ಸಭೆ ಆರಿಯಡ್ಕ ಏಳ್ನಾಡುಗುತ್ತು ನಲ್ಲಿ ನಡೆಯಿತು.

500 ವರ್ಷಗಳ ಇತಿಹಾಸ ಇರುವ ಮನೆತನ – ಚಿಕ್ಕಪ್ಪ ನಾೖಕ್‌
ಕುಟುಂಬದ ಹಿರಿಯರಾದ ಚಿಕ್ಕಪ್ಪ ನಾೖಕ್‌ ಆಧ್ಯಕ್ಷತೆ ವಹಿಸಿ ಮಾತನಾಡಿ ಬಂಟ ಮನೆತನಗಳಲ್ಲಿ ಅರಿಯಡ್ಕ ಏಳ್ನಾಡುಗುತ್ತು ಕೂಡ ಒಂದು. 5೦೦ವರ್ಷ ಗಳ ಇತಿಹಾಸ ಇರುವ ಮನೆತನದಲ್ಲಿ ಹಿಂದಿನ ಅಳಿಯಕಟ್ಟು ಸಂಪ್ರದಾಯದಂತೆ 450 ಮಂದಿ ಸದಸ್ಯರಿದ್ದಾರೆ.ಈ ಮನೆಯಲ್ಲಿ 60-70 ಜನರು ವಾಸವಿದ್ದ ಕೂಡುಕುಟುಂಬವಾಗಿತ್ತು.ಇದೀಗ ನವೀಕೃತ ತರವಾಡು ಮನೆ,ದೈವಸ್ಥಾನಗಳ ನಿರ್ಮಾಣ ಮುಂತಾದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ -ತಿಮ್ಮಪ್ಪ ರೈ.
ಕುಟುಂಬದ ಸದಸ್ಯ ತಿಮ್ಮಪ್ಪ ರೈ ಪಾಪೆಮಜಲು ಮಾತನಾಡಿ ಧರ್ಮದೈವದ ಪಿಲಿಭೂತದ ನೂತನ ದೈವಸ್ಥಾನ,ಉತ್ಸವ ಕಟ್ಟೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ಗುಳಿನಕಟ್ಟೆ ನಿರ್ಮಾಣವಾಗಿದೆ.ಕುಟುಂಬದ ಸದಸ್ಯರು ಧನಸಹಾಯದಿಂದ ಕಾಮಗಾರಿ ನಡೆಯುತ್ತಿದೆ.ಸಕಲ ಸಿದ್ಧತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.


2000 ಜನ ಸೇರುವ ನಿರೀಕ್ಷೆ – ಲಕ್ಷ್ಮೀನಾರಾಯಣ ಶೆಟ್ಟಿ
ಕುಟುಂಬದ ಸದಸ್ಯ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ತಿಂಗಳಾಡಿ ಮಾತನಾಡಿ ಎ 21 ರಿಂದ ಎ. 24 ರ ವರೆಗೆ ಕುಟುಂಬದ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.ಆಯಾ ಸಮಿತಿಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಗಿದ್ದು ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಲಾಗಿದೆ.ಸಮಿತಿಯ ಜವಾಬ್ದಾರಿ ಯನ್ನು ವಿವರಿಸಿದರು.ಸುಮಾರು 2000 ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

‌ ಕುಟುಂಬ ಸದಸ್ಯರ ಹುಮ್ಮಸ್ಸು – ಕೃಷ್ಣ ರೈ
ಕುಟುಂಬದ ಸದಸ್ಯ ಎ ಕೃಷ್ಣ ರೈ ಪನ್ನೆಗುತ್ತು ಮಾತನಾಡಿ ಹಲವು ವರ್ಷಗಳ ಹಿಂದೆ ಇದ್ದ ಇತಿಹಾಸ ಮರುಕಳಿಸುವ ಸಂದರ್ಭವಾಗಿದೆ.ಕುಟುಂಬ ಸದಸ್ಯರ ಹುಮ್ಮಸ್ಸು ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕುಟುಂಬದ ಪ್ರಮುಖರಾದ ಎ.ಸುಬ್ಬಯ್ಯ ಶೆಟ್ಟಿ,ಸತ್ಯನಾರಾಯಣ ರೈ ಆದೂರು, ಮಹಿಳ್ನಾಥ ಶೆಟ್ಟಿ ಸಾಂತ್ಯ, ಉದಯಶಂಕರ ಶೆಟ್ಟಿ, ಎ.ಕೆ ರೈ, ವಿನೋದ್ ಶೆಟ್ಟಿ, ಕರುಣಾಕರ ರೈ,ಸಂದೇಶ್ ಶೆಟ್ಟಿ,ಎ.ಬ್ರಿಜೇಶ್ ಶೆಟ್ಟಿ, ಮನೋಹರ ರೈ, ಸಾರ್ಥಕ್ ರೈ ಪಾಪೆಜಾಲು, ವಿವೇಕ್ ರೈ ಗೋಳ್ತಿಲ, ಮುರಳೀಧರ ರೈ ಬೆದ್ರುಮಾರ್, ವಿಕ್ರಂ ರೈ ಸಾಂತ್ಯ,ಸುರೇಶ್ ಆಳ್ವ ಸಾಂತ್ಯ, ಸತೀಶ್ ರೈ, ಸದಾಶಿವ ರೈ ಬೆಳ್ಳಿಪ್ಪಾಡಿ, ಶುಭಮಾಲಿನಿ ಡಿ ಮಲ್ಲಿ, ವಿನಯ.ಆರ್.ಶೆಟ್ಟಿ ಸಾಂತ್ಯ,ಪ್ರೇಮಾ ಕೆ ಶೇನವ ಮತ್ತಿತರರು ಉಪಸ್ಥಿತರಿದ್ದರು.
ಕುಟುಂಬದ ಸದಸ್ಯರಾದ ಸುಭಾಷ್ ಶೆಟ್ಟಿ ಸ್ವಾಗತಿಸಿದರು.ಶ್ರೀರಾಮ ಪಕ್ಕಳ ವಂದಿಸಿದರು.
.

LEAVE A REPLY

Please enter your comment!
Please enter your name here