ನೂಜಿಬಾಳ್ತಿಲ: ಬಾಡಿಗೆ ಮನೆಯಲ್ಲಿ ಮಲಗಿದ್ದ ತಮಿಳುನಾಡು ಮೂಲದ ವ್ಯಕ್ತಿ ಮೃತ್ಯು

0

ಕಡಬ: ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ರಾತ್ರಿ ಮಲಗಿದ್ದ ತಮಿಳುನಾಡಿನ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಜೇನುಸಾಕಣೆಯ ಕೆಲಸಕ್ಕಾಗಿ‌ ವಿಜಿನ್ ಎಂಬವರಿಗೆ ಕನ್ವರೆ ಚೆನ್ನಪ್ಪ ಗೌಡರು ಬಾಡಿಗೆ ಮನೆ ನೀಡಿದ್ದು ವಿಜಿನ್ ಅವರು ಅಭಿನೇಷ್. ವಿನ್ನರ್‌.ಎ ಹಾಗೂ ಸುಜಿನ್‌ ಅಲ್ಭನ್‌ ಎಂಬವರುಗಳನ್ನು ಕರೆತಂದಿದ್ದರು. ಈ ಬಾಡಿಗೆ ಮನೆಯಲ್ಲಿ ವಾಸವಿದ್ದವರ ಪೈಕಿ ಸುಜಿನ್‌ ಅಲ್ಭನ್‌ ಎಂಬಾತನು, ಮಾ.27ರಂದು ರಾತ್ರಿ ಮಲಗಿದವರು ಬೆಳಿಗ್ಗೆ ನೋಡಿದಾಗ ಮೃತಪಟ್ಟಿದ್ದಾರೆ. ಈ ಬಗ್ಗೆ ಚೆನ್ನಪ್ಪ ಗೌಡ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here