ಶ್ರೀಭಗವತೀ ಸಹಕಾರ ಬ್ಯಾಂಕ್‌ನ 8ನೇಯ ಶಾಖೆ ಶುಭಾರಂಭ

0

ಪುತ್ತೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ 48 ವರ್ಷಗಳ ಇತಿಹಾಸವಿರುವ, ಮಂಗಳೂರಿನ ಮೊರ್ಗನ್ಸ್ ಗೇಟ್ ಜಪ್ಪುನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆಯು ಮಾ.28ರಂದು ಇಲ್ಲಿನ ಮುಖ್ಯರಸ್ತೆಯ ಏಳ್ಮುಡಿ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಪಿ.ಕೆ ಸತೀಶನ್ ಮಾತನಾಡಿ, ಸಹಕಾರ ಸಂಘಗಳಿಗೂ ಸಹಕಾರ ಬ್ಯಾಂಕ್‌ಗಳಿಗೂ ವ್ಯತ್ಯಾಸಗಳಿವೆ. ನಗರ ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ಬ್ಯಾಂಕ್‌ನಿಂದ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಬಹಳಷ್ಟು ಸಹಕಾರಿ ಸಂಘಗಳು, ಬ್ಯಾಂಕ್‌ಗಳು ದ.ಕ ಜಿಲ್ಲೆಯಲ್ಲಿ ಪ್ರಾರಂಭವಾದ ಇತಿಹಾಸವಿದೆ. ಆರ್ಥಿಕ ನೀತಿಯಿಂದ ಕೆಲವೊಂದು ಬ್ಯಾಂಕ್‌ಗಳ ಹೆಸರು ಬದಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳು ಅಧಿಕವಾಗಿದೆ. ಆದರೂ ಸಹಕಾರ ಬ್ಯಾಂಕ್‌ಗಳನು ಅಸ್ಥಿತ್ವದಲ್ಲಿದ್ದು ಜನರು ಅದನ್ನು ಪ್ರೋತ್ಸಾಹಿಸಬೇಕು ಎಂದರು.

ಉಳ್ಳಾಲ ಚಿರುಂಭ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಮಾತನಾಡಿ, ದ.ಕ ಹಾಗೂ ಉಡುಪಿಗಳಲ್ಲಿ ಬಹುತೇಕ ಬ್ಯಾಂಕ್‌ಗಳು ಹುಟ್ಟಿಕೊಂಡಿದ್ದು ಅವಿಭಜಿತ ಜಿಲ್ಲೆಗಳು ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದೆ. ಅವಿಭಜಿತ ಜಿಲ್ಲೆಯ ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆ ಅಧಿಕವಾಗಿದೆ. ಇದೇ ಪರಿಕಲ್ಪಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಪ್ರಾರಂಭಿಸಿಲಾಗಿದೆ. ಯಾವುದೇ ಸಹಕಾರಿ ಸಂಘ, ಬ್ಯಾಂಕ್‌ಗಳಲ್ಲಿ ಆಡಳಿತ ಮಂಡಲಿ ಹಾಗೂ ಸಿಬಂದಿಗಳು ಜತೆಯಾಗಿ ಮುನ್ನಡದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಭಗವತಿ ಸಹಕಾರಿ ಬ್ಯಾಂಕ್‌ನ ಶಾಖೆಯು ನಗರದ ಹೃದಯ ಭಾಗದಲ್ಲಿ ಪ್ರಾರಂಭಗೊಂಡಿದ್ದು ಎಲ್ಲರೂ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಲಾಕರ್ ಉದ್ಘಾಟಿಸಿದ ನೋಟರಿ ನ್ಯಾಯವಾದಿ ಫಝಲ್ ರಹೀಮ್ ಮಾತನಾಡಿ, ಕಳೆದ 48 ವರ್ಷಗಳಲ್ಲಿ ಭಗವತಿ ಸಹಕಾರಿ ಬ್ಯಾಂಕ್ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ಇದರಿಂದಾಗಿ ಉತ್ತಮ ಬ್ಯಾಂಕ್ ಆಗಿ ಬೆಳದು ಬಂದಿದೆ. ಪುತ್ತೂರಿನಲ್ಲಿ ಬ್ಯಾಂಕ್‌ನ 8ನೇ ಶಾಖೆಯು ಪ್ರಾರಂಭಗೊಂಡಿದ್ದು ಪುತ್ತೂರಿನ ಬೆಳವಣಿಗೆಯಲ್ಲಿ ಬ್ಯಾಂಕ್ ಹೊಸ ಮೈಲುಗಲ್ಲು ಆಗಿ ಮೂಡಿಬರಲಿ ಎಂದರು.

ಪುತ್ತೂರು ತಿಯಾ ಸಮಾಜದ ಅಧ್ಯಕ್ಷ ಗೋಪಾಲ ಮಾತನಾಡಿ, ಪುತ್ತೂರಿನಲ್ಲಿರುವ ತಿಯಾ ಸಮಾಜದಿಂದ ಸಹಕಾರಿ ಸಂಘ ಪ್ರಾರಂಭಿಸುವ ಅಪೇಕ್ಷೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ನಮ್ಮದೇ ಸಮಾಜ ಬಾಂಧವರಿಂದ ಬ್ಯಾಂಕ್‌ನ ಶಾಖೆ ಪ್ರಾರಂಭಗೊಂಡಿದ್ದು ಹೆಮ್ಮೆ ತಂದಿದೆ. ಈ ಬ್ಯಾಂಕ್‌ನ ಶಾಖೆಗಳು ಪ್ರಾರಂಭಗವಾಗಲಿ. ಸಮಾಜ ಬಾಂಧವರು ಇದೇ ಸಹಕಾರಿ ಬ್ಯಾಂಕ್‌ನ ಮೂಲಕ ವ್ಯವಹರಿಸಿ ಸಹಕರಿಸುವಂತೆ ಅವರು ವಿನಂತಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಬಿ.ಯಂ.ಮಾಧವ ಮಾತನಾಡಿ, ಕಳೆದ 48 ವರ್ಷಗಳ ಇತಿಹಾಸವಿರುವ ಸಹಕಾರ ಬ್ಯಾಂಕ್‌ನ ೮ ಶಾಖೆಯ ಮೂಲಕ ಪುತ್ತೂರಿಗೆ ಕಾಲಿಟ್ಟಿದ್ದೇವೆ. ಇಲ್ಲಿ ಎಲ್ಲಾ ಅನುಕೂಲಕರ ವಾತಾವರಣ ದೊರೆತಿದೆ. ನಮ್ಮ ಬ್ಯಾಂಕ್ ಆರ್‌ಬಿಐಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ಬ್ಯಾಂಕ್‌ನಲ್ಲಿ ಧೈರ್ಯದಿಂದ ವ್ಯವಹರಿಸಬಹುದು. ಠವಣಿಗಳಿಗೆ ಆರ್‌ಬಿಐಯ ಗ್ಯಾರಂಟಿಯಿದೆ. ಶಾಖೆಯಲ್ಲಿ ಅನುಭವೀ ಸಿಬಂದಿಗಳಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ. ಹಿರಿಯ ನಾಗರೀಕರ ಅನುಕೂಲಕ್ಕಾಗಿ ಮನೆ ಭಾಗಿಲಿಗೆ ಬಂದು ಸೇವೆ ನೀಡಲಿದ್ದಾರೆ. ಮುಂದಿನ 2 ವರ್ಷದಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಲಿದ್ದು ಈ ಸಮಯದಲ್ಲಿ 10ಶಾಖೆಯನ್ನು ತೆರೆಯಲಾಗುವುದು. ಅಲ್ಲದೆ ಠೇವಣಿಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.

ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, 1977 ರಲ್ಲಿ ಶ್ರೀ ಭಗವತೀ ಶ್ರೇಯೋಭಿವೃದ್ದಿ ಸಹಕಾರ ಸಂಘವಾಗಿ ನೋಂದಣಿಯಾಗಿದ್ದ ಸಂಘವು 1984ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾವಣೆಗೊಂಡು ಶ್ರೀಭಗವತಿ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ನಂತರ ಬ್ಯಾಂಕಿನ ಶಾಖೆಗಳು ವಿಸ್ತರಣೆಗೊಂಡು 2೦೦೦ದಲ್ಲಿ ವಿಟ್ಲದಲ್ಲಿ 7ನೇ ಶಾಖೆ ಆರಂಭಿಸಿತ್ತು. 2022-23ರಲ್ಲಿ ಆರ್‌ಬಿಐನಿಂದ ಫೈನಾನ್ಸಿಯಲ್ ಸೌಂಡ್ ಬ್ಯಾಂಕ್ ಅನುಮತಿ ಪಡೆದುಕೊಂಡು ನಂತರ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದೀಗ ಪುತ್ತೂರನಲ್ಲಿ 8ನೇ ಶಾಖೆಯನ್ನು ಆರಂಭಿಸಿದೆ. ನಮ್ಮ ಬ್ಯಾಂಕ್ ಆರ್‌ಬಿಐಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್‌ನಲ್ಲಿ 21,766 ಸದಸ್ಯರಿಂದ 4.77 ಕೋಟಿ ಪಾಲು ಬಂಡವಾಳ ಹೊಂದಿದೆ. ಆರ್‌ಬಿಐನಿಂದ ಫೈನಾನ್ಸಿಯಲ್ ಸೌಂಡ್ ಬ್ಯಾಂಕ್ ಅನುಮತಿ ದೊರತೆರೆ ಪ್ರತಿವರ್ಷ ಒಂದೊಂದು ಶಾಖೆ ತೆರೆಯಲಾಗುವುದು ಎಂದರು.

ನೂತನ ಶಾಖೆಯನ್ನು ಸಮಾಜದ ಹಿರಿಯರಾದ ಜಯರಾಮ ಉಕ್ಕುಡ ಉದ್ಘಾಟಿಸಿದರು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ದೇವದಾಸ ಕೊಲ್ಯ, ನಿರ್ದೇಶಕರಾದ ನಾರಾಯಣ ಕೆ., ಆನಂದ ಬಿ., ವಿಶ್ವನಾಥ, ಕಿರಣ್, ರಾಜೇಶ್ ಯು., ರಾಜೇಶ್ ಭಂಡಾರಿ, ಆಶಾ ಚಂದ್ರ ಮೋಹನ್, ಶರ್ಮಿಲಾ, ಸರೀಲ್ ಅರುಣ್ ಬಂಗೇರ, ಪದ್ಮನಾಭ ಬಿ. ಕುದ್ರೋಳಿ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲಪಾಡಿ, ಹಾಗೂ ಮಹಾದೇವಿ ಸಂಕೀರ್ಣದ ಮ್ಹಾಲಕ ರಾಜೇಶ್ ಯು.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಠೇವಣಿ ಪತ್ರ ವಿತರಣೆ:
ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಠೇವಣಿಯಿರಿಸಿದ ಗಣೇಶ್ ಕುಂಟಲ್ಪಾಡಿ, ನಾರಾಯಣ ಕೆ., ವಿಶ್ವನಾಥ, ಸರೀಲ್ ಅರುಣ್ ಬಂಗೇರ, ಸತೀಶ್, ಚೈತನ್ಯ, ಉಷಾ ಪ್ರಭಾಕರ್, ಪದ್ಮನಾಭ ಬಿ., ಕಟ್ಟಡ ಮ್ಹಾಲಕ ರಾಜೇಶ್ ಯು.ಪಿಯವರಿಗೆ ಕಾರ್ಯಕ್ರಮದಲ್ಲಿ ಠೇವಣಿ ಪತ್ರ ವಿತರಿಸಲಾಯಿತು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್ ಸ್ವಾಗತಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜೆಪ್ಪು ಶಾಖಾ ವ್ಯವಸ್ಥಾಪಕ ರಾಘವ ಉಚ್ಚಿಲ್, ಹಿರಿಯ ಸಹಾಯಕಿ ಶಕುಂತಲಾ ರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಆಶಾ ಚಂದ್ರಮೋಹನ್ ವಂದಿಸಿದರು.
ನಗರಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಮೂರ್ತೆದಾರರ ಮಹಾ ಮಂಡಲದ ನಿರ್ದೇಶಕ ವಿಜಯ ಕುಮಾರ್ ಸೊರಕೆ, ರಾಘವೇಂದ್ರ ಪೈಂಟ್ಸ್ ಮ್ಹಾಲಕ ಸತ್ಯಶಂಕರ್ ಭಟ್, ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸನ್, ರಾಜೇಶ್ ಕರವೀರ್, ಪುತ್ತೂರು ತಿಯಾ ಸಮಾಜದ ಉಪಾಧ್ಯಕ್ಷ ಜೆ.ಪಿ ಸಂತೋಷ್ ಮುರ, ಸಂಧ್ಯಾ ರಾಜೇಶ್, ಸರಿತಾ ಬಿ.ಎಮ್, ಮೋಹಿತ್ ಉಕ್ಕುಡ, ಕುದ್ರೋಳಿ ಭಗವತಿ ಕ್ಷೇತ್ರದ ಮಹಿಳಾ ಘಟಕದ ಉಷಾ ಪ್ರಭಾಕರ್ ಯೆಯ್ಯಾಡಿ, ಯಶೋಧ, ಬ್ಯಾಂಕನ್ ಮೌಲ್ಯ ಮಾಪಕ ಆದರ್ಶ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here