ಪುತ್ತೂರು:ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ೮ನೇ ತರಗತಿಯ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ಇವರು ಆಫ್ರಿಕಾದ ಟುನಿಷಿಯದ ಟುನಿಷಿಯ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ ಟೆಕ್ನಾಲಜಿ (ATAST – Tunisia Association for the future of Science & Technology) ವತಿಯಿಂದ ನಡೆಸಲಾದ I-FEST² ಅಂತರ್ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಟಾಪ್‌ಟೆನ್ ಪ್ರೆಸೆಂಟೇಷನ್‌ಗೆ ಅವಕಾಶ ಪಡೆದು ಇದೀಗ ಗ್ರ್ಯಾಂಡ್ ಗೋಲ್ಡ್ ಮೆಡಲ್ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಟುನಿಷಿಯದಲ್ಲಿ ನಡೆದ ಸಮಾರಂಭದಲ್ಲಿ, ಅಸೋಸಿಯೇಷನ್ ಫಾರ್ ಟೆಕ್ನಾಲಜಿ ಆಂಡ್ ಸೈನ್ಸ್ ಟುನಿಷಿಯದ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಹೇತಮ್ ಸ್ಲಿಮೇನ್ ಅವರು ಗೋಲ್ಡ್ ಮೆಡಲ್ ಪ್ರದಾನ ಮಾಡಿ ಅಭಿನಂದಿಸಿದರು. ಆಪ್ತಚಂದ್ರಮತಿ ಇವರು ‘ಕಿಡ್ಡಿ ಸೇಫ್ ಕನೆಕ್ಟ್ (Kiddi Safe Connect)ಎಂಬ ಯೋಜನೆಯನ್ನು, ಮಾ.22ರಿಂದ 28ರವರೆಗೆ ಆಫ್ರಿಕಾದ ಟುನಿಷಿಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಡಿಸಿದ್ದರು.ವಿವೇಕಾನಂದ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಪ್ರಯೋಗಾಲಯದ ಬೋಧಕರಾದ ವೆಂಕಟೇಶ್ ಮತ್ತು ಮಂಗಳೂರಿನ ಟೆಕ್ನೋಮಸ್ ಸಂಸ್ಥೆಯ ಸ್ಥಾಪಕರಾದ ಅಶ್ವಿನ್ ಕಲ್ಲಾಜೆ ಹಾಗೂ ಶಾಲಾ ವಿಜ್ಞಾನ ಶಿಕ್ಷಕಿ ರಂಜಿತ ಇವರ ಮಾರ್ಗದರ್ಶನದಲ್ಲಿ ಇವರು ಈ ಯೋಜನೆಯನ್ನು ಸಿದ್ಧಪಡಿಸಿದ್ದರು.ಆಪ್ತಚಂದ್ರಮತಿ ಮುಳಿಯ ಅವರು ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಕೇಶವಪ್ರಸಾದ್ ಮುಳಿಯ ಹಾಗೂ ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿಯ ಪುತ್ರಿ