ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಗುರು ರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮಾ.31 ರಂದು ಚಾಲನೆ ದೊರಕಿದ್ದು, ಬಾಲಾಲಯದಲ್ಲಿದ್ದ ಶ್ರೀ ಗುರು ರಾಘವೇಂದ್ರರ ಶಿಲಾ ಮೂರ್ತಿಯನ್ನು ಭಕ್ತ ಸಮೂಹದ ಸಹಕಾರದಲ್ಲಿ ನೂತನ ಬೃಂದಾವನ ಗುಡಿಗೆ ಸ್ಥಳಾಂತರಿಸಲಾಯಿತು.
ಮುಂಜಾನೆ ಶ್ರೀ ದೇವತಾ ಪ್ರಾರ್ಥನೆ, ಶಿಲ್ಪಿಗಳಿಂದ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಕಂಕಣ ಬಂಧನ, ಗಣಪತಿ ಹೋಮ, ಅಂಕುರಾರ್ಪಣೆ ನಡೆದು, ಸಾಯಂಕಾಲ ಪುತ್ತೂರು ರಾಘವೇಂದ್ರ ಮಠದ ವೇದಮೂರ್ತಿ ರಾಘವೇಂದ್ರ ಉಡುಪ ರವರಿಂದ ತೋರಣ ಮುಹೂರ್ತ ಜರಗಿತು. ಅಮೇರಿಕಾದ ನ್ಯೂಜೆರ್ಸಿ ಶ್ರೀ ಕೃಷ್ಣ ಬೃಂದಾವನ ಇದರ ಮುಖ್ಯ ಅರ್ಚಕ ಯೋಗೇಂದ್ರ ಭಟ್ ಉಳಿ ಇವರಿಂದ ಅನ್ನಛತ್ರದ ಉದ್ಘಾಟನೆಯು ನೆರವೇರಿತು. ಬಳಿಕ ವಿವಿಧ ವೈದಿಕ ವಿಧಿ ವಿಧಾನಗಳು ನಡೆಯಿತು.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರುಗಳಾದ ಕೆ. ರಾಧಾಕೃಷ್ಣ ನಾೖಕ್, ಕೆ. ಹರೀಶ್ ಉಪಾಧ್ಯಾಯ, ಬಿಳಿಯೂರು ಧನ್ಯಕುಮಾರ್ ರೈ, ಮಠದ ಅಧ್ಯಕ್ಷ ಕೆ. ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಪ್ರಮುಖರಾದ ಕೆ ಸದಾನಂದ, ಪ್ರಶಾಂತ್ ಶಿವಾಜಿ ನಗರ, ಪ್ರಶಾಂತ್ ನೆಕ್ಕಿಲಾಡಿ, ಶ್ರೀನಿಧಿ ಉಪಾಧ್ಯಾಯ, ಶಾಂತಾರಾಮ ಕಾಂಚನ, ಹರೀಶ್ ನಟ್ಟಿಬೈಲ್, ಡಾ. ಎಂ.ಎನ್. ಭಟ್, ಕೆ. ಗಣೇಶ್ ಭಟ್, ವಿಷ್ಣುಮೂರ್ತಿ ಕುದ್ದಣ್ಣಾಯ, ವಾಮನ ಉಬಾರ್, ನಿತೇಶ್ ಗಾಣಿಗ, ಶರತ್ ಕೋಟೆ, ಜಯಪ್ರಶಾಶ್, ಐ. ಚಿದಾನಂದ ನಾಯಕ್, ಡಾ. ದಿಲೀಪ್, ಸ್ವರ್ಣೇಶ್, ಬಿಪಿನ್, ಶಕೀಲಾ ಕುಂದರ್, ಮುಖೇಶ್ ಕುಂದರ್, ಐ. ಪುರುಷೋತ್ತಮ ನಾಯಕ್, ಸುಂದರ ಆದರ್ಶ ನಗರ, ಹರೀಶ್ ಭಂಡಾರಿ, ಕೆ. ಜಗದೀಶ್ ಶೆಟ್ಟಿ, ಉಷಾ ಮುಳಿಯ, ಶಾಂತಾ ಕುಂಟಿನಿ, ರಜತಾ ಮತ್ತಿತರರು ಭಾಗವಹಿಸಿದ್ದರು.