ನೆಲ್ಯಾಡಿ: ವಿಶ್ವಕರ್ಮ ಸಮಾಜಬಾಂಧವರ ಸಭೆ-ಸಮಿತಿ ರಚನೆ

0

ನೆಲ್ಯಾಡಿ: ನೆಲ್ಯಾಡಿಯಲ್ಲಿ ನೂತನವಾಗಿ ಆರಂಭಗೊಂಡ ವಿಶ್ವಕರ್ಮ ಸಮಿತಿ ಸಭೆ ಮಾ.31ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.
ಕೃಷ್ಣನ್ ಕುಟ್ಟಿ ನೆಟ್ಟಣ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸಜಿ ಮಾದೇರಿ, ಉಪಾಧ್ಯಕ್ಷರಾಗಿ ಹರಿಕೃಷ್ಣ ಹೊಸಮಠ, ಕಾರ್ಯದರ್ಶಿಯಾಗಿ ರೇಷ್ಮಾಶಶಿ, ಜೊತೆ ಕಾರ್ಯದರ್ಶಿಯಾಗಿ ವಿನೋದ ಮರ್ದಾಳ, ಕೋಶಾಧಿಕಾರಿಯಾಗಿ ಉಮೇಶ್ ನೆಕ್ಕರೆ ಹಾಗೂ 8 ನಿರ್ದೇಶಕರ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಸಜಿ ಮಾದೇರಿ ಅವರು ವಿಶ್ವಕರ್ಮ ಸಮುದಾಯದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.
ವಿನೋದ್ ಮರ್ದಾಳ ಸ್ವಾಗತಿಸಿದರು. ಉಮೇಶ್ ನೆಕ್ಕರೆ ವಂದಿಸಿದರು. ರಾಜನ್ ನೆಲ್ಯಾಡಿ ಪ್ರಾರ್ಥಿಸಿದರು. ಸಭೆಯ ಕೊನೆಗೆ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here