ಸಹಾಯವಾಣಿ ಆರಂಭಿಸಿದ ಅಬಕಾರಿ ಇಲಾಖೆ

0

ಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಾಣೆ, ದಾಸ್ತಾನು ಬಗ್ಗೆ ದೂರು ನೀಡಲು ಅಬಕಾರಿ ಇಲಾಖೆ 1800-4252550 ಸಹಾಯವಾಣಿ ತೆರೆದಿದೆ. ಮೂರು ವರ್ಷಗಳಲ್ಲಿ ಪ್ರತಿ ಮದ್ಯದಂಗಡಿಗಳ ಎತ್ತವಳಿ ಆಧಾರದ ಮೇಲೆ ಚುನಾವಣೆ ಸಮಯದಲ್ಲಿ ಮದ್ಯದಂಗಡಿಗಳು ಖರೀದಿಸುವ ಮದ್ಯ ಬಗ್ಗೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಇಲಾಖೆ ಸೂಚಿಸಿದೆ. ಹೋಟೆಲ್ ಮತ್ತು ವಸತಿಗೃಹ (ಸಿಎಲ್-7), ಕ್ಲಬ್ (ಸಿಎಲ್4) ಸನ್ನದುಗಳ ಎತ್ತವಳಿ ಮೇಲೆ ವಿಶೇಷ ಗಮನ ಹರಿಸಬೇಕು ಎಂದು ಇಲಾಖೆ ಹೇಳಿದೆ.

ಮದ್ಯ ಉತ್ಪಾದನಾ ಘಟಕಗಳು ತಮ್ಮ ಉತ್ಪಾದನೆ, ಶೇಖರಣೆ, ಸಾಗಾಣಿಕೆ ಕುರಿತು ಹೆಚ್ಚಿನ ನಿಗಾ ವಹಿಸಿ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಮದ್ಯ ತಯಾರಿಸಲು ಕಚ್ಚಾ ವಸ್ತುಗಳ ಸಾಗಾಣಿಕೆ, ಘಟಕದಿಂದ ಉತ್ಪಾದಿಸುವ ವಸ್ತುಗಳ ಮೇಲೆ ಎಚ್ಚರ ವಹಿಸಬೇಕು. ಘಟಕದ ಪ್ರವೇಶ ದ್ವಾರ, ಉತ್ಪಾದನಾ ಆವರಣ, ಲೋಡಿಂಗ್ ಈ ಹಾಗೂ ರವಾನೆ ಸ್ಥಳದಲ್ಲಿ ತಿಂಗಳವರೆಗೆ ಚಿತ್ರೀಕರಣ ಸಂಗ್ರಹಿಸುವ ಸಿಸಿ ಕ್ಯಾಮರಾ ಅಳವಡಿಸಬೇಕು. ಎಲ್ಲಾ ತನಿಖಾ ಠಾಣೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಚಿತ್ರೀಕರಣ ಸಂಗ್ರಹಿಸಬೇಕು. ಉತ್ಪಾದನಾ ಘಟಕಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಸ್ಥಳೀಯ ಸಿಬ್ಬಂದಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುವಂತೆ ಅಬಕಾರಿ ಉಪ ಆಯುಕ್ತರು ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆ ತಾಕೀತು ಮಾಡಿದೆ.

LEAVE A REPLY

Please enter your comment!
Please enter your name here