ಚುನಾವಣಾ ಆಯೋಗದಿಂದ ಮತದಾರರ ಪರಿಷ್ಕರಣೆ

0

ದ.ಕ.ಕ್ಷೇತ್ರದಲ್ಲಿ ಮನೆಯಿಂದ ಮತದಾನಕ್ಕೆ 85 ವರ್ಷ ಮೇಲ್ಪಟ್ಟ 6,051, ವಿಕಲಚೇತನ 1,942 ಮತದಾರರು-ಪುತ್ತೂರು ಕ್ಷೇತ್ರದಿಂದ 85 ವರ್ಷ ಮೇಲ್ಪಟ್ಟವರು 787, ವಿಕಲಚೇತನ 340 ಮಂದಿ ಮತದಾನಕ್ಕೆ ಅರ್ಹತೆ

ಪುತ್ತೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗದ ನಿರ್ದೇಶನದಂತೆ ದ.ಕ.ಜಿಲ್ಲೆಯಲ್ಲಿ ಈ ಬಾರಿ 85 ವರ್ಷ ಮೇಲ್ಪಟ್ಟ ಹಾಗೂ ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ವಿಕಲಚೇತನ (ಪಿಡಬ್ಲ್ಯುಡಿ) ಮತದಾರರಲ್ಲಿ ಒಟ್ಟು 7,993 ಮತದಾರು ಮನೆಯಿಂದ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಎ.26ರಂದು ಸಾರ್ವತ್ರಿಕ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಮನೆಯಿಂದಲೇ ಮತದಾನ ಮಾಡಲು ಜಿಲ್ಲಾ ಚುನಾವಣಾ ಆಯೋಗದಿಂದ ಸಿದ್ಧತೆಗಳು ನಡೆಯುತ್ತಿದ್ದು ಜಿಲ್ಲಾ ಚುನಾವಣೆ ಆಯೋಗದಿಂದ ಮತದಾರರ ಪರಿಷ್ಕರಣೆ ನಡೆಸಲಾಗಿದ್ದು ಒಟ್ಟು 7,993 ಮತದಾರು ಮನೆಯಿಂದ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 85 ವರ್ಷ ಮೇಲ್ಪಟ್ಟವರು 6,051 ಹಾಗೂ ವಿಕಲಚೇತನ 1,942 ಮತದಾರರು ಇದ್ದಾರೆ. ಮನೆಯಿಂದಲೇ ಮತದಾನ ಬಯಸುವವವರಿಗೆ ನಮೂನೆ 12ರಡಿಯಲ್ಲಿ ಅರ್ಜಿ ಸಲ್ಲಿಸಲು ಎ.2 ಅಂತಿಮ ದಿನಾಂಕ ನೀಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 85 ವರ್ಷ ಮೇಲಟ್ಟ 10,502 ಹಾಗೂ 10,538 ವಿಕಲಚೇತನ ಮತದಾರರಿಗೆ ನಮೂನೆ 12ರಡಿ ಅರ್ಜಿ ವಿತರಿಸಲಾಗಿತ್ತು. ಅರ್ಜಿ ಸ್ವೀಕರಿಸಿದ 85 ವರ್ಷ ಮೇಲ್ಪಟ್ಟವರಲ್ಲಿ 6055 ಹಾಗೂ ವಿಕಲಚೇತನರಲ್ಲಿ 1,975 ಮಂದಿ ಮನೆಯಿಂದ ಮತದಾನ ಆಯ್ದುಕೊಂಡಿದ್ದರು. ದ.ಕ. ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 21,896 ಹಾಗೂ ವಿಕಲಚೇತನ 14,084 ಮತದಾರರನ್ನು ಗುರುತಿಸಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲಿಸಲಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಈ ವಯೋಮಿತಿಯನ್ನು 30 ವರ್ಷದಿಂದ 85 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 10,808 ಮತದಾರರು. 1980 ಮಂದಿ ವಿಕಲಚೇತನ ಮತದಾರರು ಮನೆಯಿಂದ ಮತದಾನಕ್ಕೆ ಅರ್ಹತೆ ಪಡೆದಿದ್ದರು.

ಪುತ್ತೂರು ಕ್ಷೇತ್ರದಿಂದ 85 ವರ್ಷ ಮೇಲ್ಪಟ್ಟವರು 787, ವಿಕಲಚೇತನ 340 ಮತದಾರರು:
ಮನೆಯಿಂದಲೇ ಮತದಾನಕ್ಕೆ ಈವರೆಗೆ ನೋಂದಣಿ ಮಾಡಿಸಿಕೊಂಡ 85 ವರ್ಷ ಮೇಲ್ಪಟ್ಟ ಮತದಾರರಲ್ಲಿ ಬಂಟ್ವಾಳ ವಿಧಾನಸಭೆ ಕ್ಷೇತ್ರದಲ್ಲಿ 623, ಬೆಳ್ತಂಗಡಿಯಲ್ಲಿ 573, ಮಂಗಳೂರು 351, ನಗರ ಉತ್ತರ 793, ನಗರ ದಕ್ಷಿಣ 1310, ಮೂಡಬಿದಿರೆ 913, ಪುತ್ತೂರು 787 ಹಾಗೂ ಸುಳ್ಯದಲ್ಲಿ 701 ಮಂದಿ ಮನೆಯಿಂದ ಮತದಾನದ ಅರ್ಹತೆ ಪಡೆದಿದ್ದಾರೆ.

ವಿಕಲಚೇತನ ಮತದಾರರಲ್ಲಿ ಬಂಟ್ವಾಳದಲ್ಲಿ 353, ಬೆಳ್ತಂಗಡಿ- 239, ಮಂಗಳೂರು- 164, ಮಂಗಳೂರು ಉ. 165, ಮಂಗಳೂರು ದ. 91. ಮೂಡುಬಿದಿರೆ 253, ಪುತ್ತೂರು 340, ಸುಳ್ಯದಲ್ಲಿ 337 ಮಂದಿ ಮನೆಯಿಂದ ಮತದಾನದ ಅರ್ಹತೆ ಪಡೆದಿದ್ದಾರೆ.

ಮನೆಯಿಂದ ಮತದಾನಕ್ಕೆ ದಿನ ನಿಗದಿ ಬಾಕಿ
ಚುನಾವಣಾ ಸಿಬಂದಿಯಿಂದ ಮನೆಯಲ್ಲಿಯೇ ಚುನಾವಣಾ ಪ್ರಕ್ರಿಯೆ

ದ.ಕ. ಜಿಲ್ಲೆಯಲ್ಲಿ ಎ.26ರಂದು ಈಗಾಗಲೇ ಗುರಿತಸಲಾದ 1,876 ಮತಗಟ್ಟೆಗಳಲ್ಲಿ ಸಾರ್ವತ್ರಿಕ ಮತದಾನ ನಡೆಯಲಿದೆ. ಇದರ ಮೊದಲೇ ಮನೆಯಿಂದಲೇ ಮತದಾನ ಮಾಡುವವರ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಚುನಾವಣಾ ಆಯೋಗ ಮತದಾನದ ದಿನಾಂಕ ನಿಗದಿಪಡಿಸಬೇಕಾಗಿದೆ. ಚುನಾವಣಾ ಸಿಬ್ಬಂದಿ ನಿಗದಿತ ದಿನಾಂಕಗಳಂದು ಮನೆಗಳಿಗೆ ಭೇಟಿ ನೀಡಿ ವೀಡಿಯೊ ಚಿತ್ರೀಕರಣದೊಂದಿಗೆ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ಮನೆಯಿಂದಲೇ ಮತದಾನ ಮಾಡುವವರಿಗೆ ಎರಡು ದಿನಾಂಕಗಳನ್ನು ನೀಡಲಾಗುತ್ತದೆ. ಚುನಾವಣೆ ಸಿಬ್ಬಂದಿ ಮೊದಲ ದಿನ ಮತದಾನ ಪ್ರಕ್ರಿಯೆಗೆ ತೆರಳಿದ ಸಂದರ್ಭ ನೋಂದಣಿ ಮಾಡಿಕೊಂಡ ಮತದಾರರು ಲಭ್ಯವಾಗಿಲ್ಲದಿದ್ದರೆ ನಿಗದಿ ಪಡಿಸಿದ ಮತ್ತೊಂದು ದಿನ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆ ದಿನವೂ ಮನೆಯಿಂದ ಮತದಾನ ಆಯ್ದುಕೊಂಡವರು ಮನೆಯಲ್ಲಿ ಲಭ್ಯವಾಗದಿದ್ದಲ್ಲಿ ಮತದಾನ ಪ್ರಕ್ರಿಯೆಯಿಂದಲೇ ಅವರು ಹೊರಗುಳಿಯಲಿದ್ದಾರೆ.

LEAVE A REPLY

Please enter your comment!
Please enter your name here