ಪಾಲ್ತಾಡಿ ಸ.ಹಿ.ಪ್ರಾ ಶಾಲೆ ವಿದ್ಯಾರ್ಥಿಗಳಿಂದ ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ಭೇಟಿ

0

ಪುತ್ತೂರು: ಸ.ಹಿ.ಪ್ರಾ ಶಾಲೆ ಪಾಲ್ತಾಡಿ ಇಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಹೊರ ಸಂಚಾರದಡಿಯಲ್ಲಿ ಕೃಷಿ ಮಾಹಿತಿ ಪಡೆಯಲು “ಸಿರಿ ಕಡಮಜಲು ಕೃಷಿ ಕ್ಷೇತ್ರ” ಇಲ್ಲಿಗೆ ಮಾ.30ರಂದು ಭೇಟಿ ನೀಡಿದರು. ಪ್ರಗತಿಪರ ಕೃಷಿಕ ಸುಭಾಷ್‌ ರೈ ಕಡಮಜಲು ಹಾಗೂ ಪ್ರೀತಿ ಎಸ್‌ ರೈ ಸ್ವಾಗತಿಸಿದರು. ಸುಭಾಷ್‌ ರೈ ಅವರು ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಕೃಷಿ ಕ್ಷೇತ್ರದಲ್ಲಿ ಸಂಚಾರ ಮಾಡಲಾಯಿತು. ಕೃಷಿ ಬೆಳೆಗಳಾದ ಅಡಿಕೆ, ತೆಂಗು, ಗೇರು ಕೊಕ್ಕೋ ಮುಂತಾದ ಕೃಷಿಯ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗೇರು ಎತ್ತರಕ್ಕೆ ಏರು ಕೃಷಿ ಖುಷಿ ಪುಸ್ತಕವನ್ನು ಭಾಗವಹಿಸಿದವರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಗುರು ಸುಜಾತ ರೈ.ಪಿ.ಜೆ, ಶಿಕ್ಷಕಿಯರಾದ ಪುಷ್ಪಲತಾ, ಮನಸ್ವಿ, ಅರುಣಾ ಹಾಗೂ ಎಸ್‌ ಡಿ ಎಮ್‌ ಸಿ ಅಧ್ಯಕ್ಷ ಜಯರಾಮ ಗೌಡ, ಉಪಾಧ್ಯಕ್ಷ ಸತ್ಯವತಿ, ಗ್ರಾ.ಪಂ ಸದಸ್ಯರಾದ ತಾರಾನಾಥ ಬೊಳಿಯಾಲ, ಹರೀಶ ಕಾಯರಗುರಿ, ಪೋಷಕರಾದ ಜಯಂತಿ, ಚಂದ್ರವತಿ, ನಿರ್ಮಲ, ಪ್ರತೀಕ್‌, ಬಾಲಕೃಷ್ಣ ಗೌಡ, ಚೇತನ ಗೌಡ ಭಾಗವಹಿಸಿದರು. 46 ವಿದ್ಯಾರ್ಥಿಗಳು ಕೃಷಿಯ ಕುರಿತು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here