ಪುಣಚ ಮಹಿಷಮರ್ದಿನಿ ದೇವರ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ, ಹೊರೆಕಾಣಿಕೆ ಸಮರ್ಪಣೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಸಂಭ್ರಮಕ್ಕೆ ಎ.7ರಂದು ಧ್ವಜಾರೋಹಣದೊಂದಿಗೆ ಚಾಲನೆ ದೊರೆಯಿತು.
ವರ್ಕಾಡಿ ಗಣೇಶ ತಂತ್ರಿಗಳ ನೇತ್ರತ್ವದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಧ್ವಜಾರೋಹಣ, ನಿತ್ಯ ಬಲಿ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಹರಿದು ಬಂದ ಹೊರಕಾಣಿಕೆ :
ಬೆಳಿಗ್ಗೆ ಗ್ರಾಮದ ವಿವಿಧ ಕಡೆಗಳಿಂದ ಸಂಗ್ರಹವಾದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ಪರಿಯಾಲ್ತಡ್ಕದಿಂದ ಚೆಂಡೆವಾದನದ ಮೂಲಕ ವೈಭವದಿಂದ ದೇವಸ್ಥಾನಕ್ಕೆ ಸಾಗಿ ಬಂತು.

ವಿಟ್ಲ ಅರಮನೆಯ ಜಯರಾಮ ಬಲ್ಲಾಳ್, ಕೃಷ್ಣಯ್ಯ ಕೆ , ಆಡಳಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here