ಪುತ್ತೂರು: ಮೂಲ ಸೌಕರ್ಯವಾದ ರಸ್ತೆ, ನೀರು ಮತ್ತು ದಾರಿ ದೀಪದ ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಚಿಕ್ಕಮುಡ್ನೂರು ಗ್ರಾಮದ ಎಣಿಮುಗೇರು ಬಡಕಾಯಿದೆಯಲ್ಲಿ ರಸ್ತೆ ಬದಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಎ.7ರ ರಾತ್ರಿ ಪ್ರತ್ಯಕ್ಷಗೊಂಡಿದೆ.
ಚಿಕ್ಕಮುಡ್ನೂರು ಗ್ರಾಮದ ಎಣಿಮುಗೇರು ಬಡಕಾಯಿದೆ ಚುನಾವಣಾ ಮತಗಟ್ಟೆ 135ರ ವ್ಯಾಪ್ತಿಯ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ ಎಂದು ಬ್ಯಾನರ್‌ನಲ್ಲಿ ಅಳವಡಿಸಲಾಗಿದೆ.