ನೆಹರುನಗರದಲ್ಲಿ ಬಿಂದು ಫ್ಯಾಕ್ಟರಿ ಔಟ್ ಲೆಟ್ ಶುಭಾರಂಭ

0

ಬಿಂದು ಕಂಪನಿಯ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯ

ಪುತ್ತೂರು: ಪ್ರತಿಷ್ಠಿತ ತಂಪು ಪಾನೀಯ ತಯಾರಿಕ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಬಿಂದು ಫ್ಯಾಕ್ಟರಿ ಔಟ್ ಲೆಟ್ ಏ.9ರಂದು ನೆಹರುನಗರದ ಪುತ್ತೂರು ಪೆಟ್ರೋ ಪ್ರಾಡಕ್ಟ್ ನ ಆವರಣದಲ್ಲಿ ಶುಭಾರಂಭಗೊಂಡಿತು.

ಮೆಗಾ ಪ್ರುಟ್ ಪ್ರೊಸೆಸಿಸಿಂಗ್ ಲಿಮಿಟೆಡ್ ಆಡಳಿತ ನಿರ್ದೇಶಕ ಸತ್ಯಶಂಕರ್ ಔಟ್ ಲೆಟ್ ನ್ನು ಉದ್ಘಾಟಿಸಿದರು. ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಜೋಶಿ ಪ್ರಥಮ ಖರೀದಿ ಮಾಡಿದರು. ಪುತ್ತೂರು ಪೆಟ್ರೋ ಪ್ರೋಡಕ್ಟ್ ನ ಆಡಳಿತ ನಿರ್ದೇಶಕ ಜೆ. ಉದಯ ಭಟ್, ನಿರ್ದೇಶಕ ಕೃಷ್ಣ ಭಟ್, ಲಕ್ಷ್ಮೀ ಭಟ್, ಜನರಲ್ ಮ್ಯಾನೇಜರ್ ಸ್ನೇಹ ಭಟ್, ಮೆಗಾ ಫ್ರುಟ್ ಪ್ರೊಸೆಸಿಸಿಂಗ್ ಲಿಮಿಟೆಡ್ ನ ನ್ಯಾಷನಲ್ ಕಮರ್ಷಿಯಲ್ & ಬ್ರ್ಯಾಂಡಿಂಗ್ ಮ್ಯಾನೇಜರ್ ಹರಿಪ್ರಸಾದ್, ಬ್ಯುಸಿನೆಸ್ ಹೆಡ್ ದೇವರಾಜ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಗ್ರಾಹಕರ ನೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು, ‘ಸಿಪ್‌ಆನ್’ ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ‘ಫ್ರುಝೂನ್’ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ‘ಸ್ನ್ಯಾಕ್ ಅಪ್’, ಭಾರತೀಯ ಸ್ನಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ ಒಂದೇ ಸೂರಿನಡಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here