ಸಾಜ ಸಮೀಪ ರಸ್ತೆ ಬದಿ ಕೋಳಿ ತ್ಯಾಜ್ಯ- ಬಲ್ನಾಡು ಗ್ರಾ.ಪಂ ನಿಂದ ತೆರವು – ಮುಂದೆ ರಸ್ತೆ ಬದಿ ತ್ಯಾಜ್ಯ ಎಸೆದರೆ ಕಠಿಣ ಕ್ರಮ

0

ಪುತ್ತೂರು: ಬಲ್ನಾಡು ಗ್ರಾ.ಪಂ ವ್ಯಾಪ್ತಿಯ ಸಾಜ ಸಮೀಪದ ಸರಳಿಕಾನ ಎಂಬಲ್ಲಿ ರಸ್ತೆ ಬದಿಯಲ್ಲಿ ಯಾರೋ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದಿದ್ದು ಬಲ್ನಾಡು ಗ್ರಾಮ ಪಂಚಾಯತ್ ನಿಂದ ತೆರವು ಮಾಡಲಾಗಿದೆ.

ಗೋಣಿಯಲ್ಲಿ ತ್ಯಾಜ್ಯ ತುಂಬಿಸಿ ಕಿಡಿಗೇಡಿಗಳು ರಸ್ತೆ ಬದಿ ಎಸೆದು ಹೋಗಿದ್ದು ಪರಿಸರದಲ್ಲಿ ದುರ್ನಾತ ಬೀರುತ್ತಿತ್ತು. ಈ ಕುರಿತು ಸಾರ್ವಜನಿಕರು ಬಲ್ನಾಡು ಗ್ರಾ.ಪಂಗೆ ಮಾಹಿತಿ ನೀಡಿದ್ದರು. ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ತ್ಯಾಜ್ಯ ತುಂಬಿದ್ದ ಗೋಣಿಯನ್ನು ಸ್ಥಳದಿಂದ ತೆರವುಗೊಳಿಸಿದರು.

ಕಠಿಣ ಕ್ರಮ :
ಈಗಾಗಲೇ ರಸ್ತೆ ಬದಿ ಎಸೆದು ಹೋಗಿದ್ದ ತ್ಯಾಜ್ಯವನ್ನು ಬಲ್ನಾಡು ಗ್ರಾ.ಪಂನಿಂದ ತೆರವು ಗೊಳಿಸಲಾಗಿದ್ದು, ಇದು ಮುಂದುವರಿದರೆ ಎಸೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯತ್ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here