ಪುತ್ತೂರು: ಬೇಸಿಗೆಯ ಉರಿ ಬಿಸಿಲಿನಲ್ಲಿ ಪಕ್ಷಿ ಸಂಕುಲ ನೀರಿಗಾಗಿ ಪರದಾಡುತ್ತಿವೆ! ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ! ಪ್ರಕೃತಿಯ ಜೀವರಾಶಿಗಳು ಬಿಸಿಲಿನ ತಾಪಕ್ಕೆ ನಲುಗುತಿವೆ. ಪ್ರಾಣಿಗಳು ಪಕ್ಷಿಗಳು ನೀರಿಗಾಗಿ ಹಾತೊರೆಯುತ್ತಿರುತ್ತೀವೆ. ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಿ ಕಟ್ಟಡಗಳಲ್ಲಿ ಪಕ್ಷಿಗಳಿಗೆ ನೀರುಣಿಸಲು ವ್ಯವಸ್ಥೆ ಮಾಡಲು ಈಗಾಗಲೆ ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದ ಪುಟಾಣಿ ಮಕ್ಕಳು ತಮ್ಮ ಮನೆಯ ಸುತ್ತಲಿರುವ ಗಿಡಮರಗಳಲ್ಲಿ ಮಡಕೆಯಲ್ಲಿ ನೀರು ತುಂಬಿಸಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ತೊಡಗಿದ್ದಾರೆ. ಪಕ್ಷಿ ಸಂಕುಲವನ್ನು ಉಳಿಸುವ ಬಗ್ಗೆ ಶಾಲೆಯಲ್ಲಿ ತಜ್ಞರೊಂದಿಗೆ ಸಂವಾದ ಮಾಡಿದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳು ಇದರ ಕುರಿತಾಗಿ ಜಾಗೃತಿ ವಹಿಸಿ ನೀರುಣಿಸುವ ಕೆಲಸ ಮಾಡುತ್ತಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನೂರಾರು ಜಾತಿಯ ಪಕ್ಷಿಗಳು ಇಂದು ಅಳಿದು ಹೋಗುವ ಸ್ಥಿತಿಗೆ ಬಂದಿದೆ ನಮ್ಮ ಮನೆಯ ಮಾಡಿನಲ್ಲಿ ಕೂಗುವ ಗುಬ್ಬಚ್ಚಿಗಳು ಕಾಣೆಯಾಗಿವೆ, ಪರಿಸರ ಸ್ವಚ್ಛ ಮಾಡುವ ಕಾಗೆಯ ಧ್ವನಿ ಕೇಳಿಸ್ತಿಲ್ಲ. ಚಿಲಿಪಿಲಿ ನಾದ ಕೇಳಿಸ್ತಿಲ್ಲ ಬನ್ನಿ ಈ ಯುಗಾದಿಯ ದಿನದಂದೆ ನಾವೆಲ್ಲರೂ ಸೇರಿ ಪಕ್ಷಿ ಸಂಕುಲ ಉಳಿಸೋಣ.-
ತಾರಾನಾಥ ಸವಣೂರು -ಮುಖ್ಯಗುರು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಪುತ್ತೂರು ದ.ಕ