ಬಿಜೆಪಿ ಮಹಿಳಾ ಮೋರ್ಚಾದಿಂದ ನಾರಿ ಶಕ್ತಿ ಸಮಾವೇಶ

0

ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಹಿಳಾ ಮೋರ್ಚಾದಿಂದ ನಾರಿ ಶಕ್ತಿ ಸಮಾವೇಶವು ಎ.9ರಂದು ಜೈನ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಮಾತನಾಡಿ, ಮೋದಿಯವರ ಯೋಜನೆಗಳಿಗೆ ಕಾಂಗ್ರೆಸ್‌ನವರು ಸುಳ್ಳು ಹೇಳಿ ತಮ್ಮ ಹೆಸರು ಹಾಕಿ ಜಾಹಿರಾತು ನೀಡಿ ಜನರನ್ನು ಮೋಸ ಮಾಡುತ್ತಿದ್ದಾರೆ. ಗರೀಬಿ ಹಟಾವೋ ಎಂದು ಇಂದಿರಾ ಗಾಂಧಿ 70ರ ದಶಕದಲ್ಲಿ ಹೇಳಿದ್ದರೂ ಅದನ್ನು ಮಾಡಲು ಮೋದಿ ಬರಬೇಕಾಯಿತು. ಇಂದಿರಾ ಗಾಂಧಿ ಮತ್ತು ಅವರ ಸಂತತಿ ಹಟಾವೋ ಮಾಡೋದಕ್ಕೆ. ಕಾಂಗ್ರೆಸ್‌ನ ಮನಸ್ಥಿತಿಯಾದ ಭ್ರಷ್ಟಾಚಾರ, ಭಯೋತ್ಪಾದನೆ ಹೋಗಲಾಡಿಸಲು ಮೋದಿ ಬರಬೇಕಾಯಿತು. 2014ರಲ್ಲಿ ಭ್ರಷ್ಟಾಚಾರದ ಕೂಪವಾಗಿದ್ದ ಭಾರತ ಸಬಲೀಕರಣ ಮಾಡಲು ಹತ್ತು ವರ್ಷಗಳಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಮಹಿಳೆಯವರಿಗೂ ಮೋದಿಯವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಕೇಂದ್ರದ ಮೋದಿಯವರ ಯೋಜನೆಗಳ ಫಲಾನುಭವಿಗಳಲ್ಲದವರು ಯಾರೂ ಇಲ್ಲ. ಪ್ರತಿದಿನ ಸುಳ್ಳು ಹೇಳಿ ಮಾತುಗಳನ್ನಾಡುವ ವಿರೋಧ ಪಕ್ಷದ ಫಲಾನುಭವಿಗಳಾಗಿದ್ದಾರೆ. ಕರ್ನಾಟಕದಲ್ಲಿ 28 ಕ್ಷೇತ್ರಗಳನ್ನು ಗೆಲ್ಲಬೇಕು. ದ.ಕ ಲೋಕ ಸಭಾ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟ ಅಭ್ಯರ್ಥಿಯಲ್ಲ. ಅವರು ಸಂಸದರಾಗಿದ್ದಾರೆ. ಜಿಲ್ಲೆಯಲ್ಲಿ ಬ್ರಿಜೇಶ್ ಚೌಟರವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸುವ ಸವಾಲು ಇದೆ. ಮೋದಿಯವರು ನಾರಿಯವರಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದು ಚುನಾವಣೆಯಲ್ಲಿ ಮತ ನೀಡುವ ನಾರಿಯವರು ಮೋದಿಗೆ ಶಕ್ತಿ ನೀಡಬೇಕು ಎಂದು ಹೇಳಿದ ಅವರು ಸ್ವಂತದ ಆಚರಣೆಗಿಂತ ದೇಶದ ಆಚರಣೆ ದೊಡ್ಡದು ಎಂಬ ಭಾವನೆಯಿಂದ ಮಹಿಳೆಯವರು ಒಟ್ಟು ಸೇರಿದ್ದಾರೆ. ಪ್ರಧಾನಿ ಮೋದಿಯವರು ಮಹಿಳೆಯರಿಗೆ ವಿಧಾನ ಸಭೆ, ಲೋಕ ಸಭೆಯಲ್ಲಿ ಶೇ.33 ಅವಕಾಶ ನೀಡಿದ್ದಾರೆ. ಅದು ಕಾಯಿದೆಯಾಗಿದ್ದು ನಮ್ಮ ಅವಕಾಶ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಈ ಚುನಾವಣೆಯು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ. ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡುವ ಚುನಾವಣೆ. ಜಗತ್ತಿಗೆ ಮಾರ್ಗದರ್ಶನ ನೀಡುವ ಕಾಲವಾಗಿದ್ದು ಮೋದಿಯವರಿಗೆ ಶಕ್ತಿ ನೀಡಬೇಕು. ಅವರ ಕನಸಿನ ವಿಕಸಿತ ಭಾರತಕ್ಕೆ ಶಕ್ತಿ ನೀಡಬೇಕು. ಭಾರತದ ಭವಿಷ್ಯದ ದೃಷ್ಠಿಯಿಂದ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲು ಮೋದಿಯನ್ನು ಬೆಂಬಲಿಸಬೇಕು. ಯಾರೊ ಒಬ್ಬ ಸಂಸದ, ಶಾಸಕ, ಸಚಿವರನ್ನಾಗಿ ನಡೆಯುವ ಚುನಾವಣೆಯಲ್ಲ. ರಾಷ್ಟ್ರಕ್ಕಾಗಿ ನಡೆಯುವ ಚುನಾವಣೆಯಾಗಿದ್ದು ಮತ್ತೆ ಪ್ರದಾನಿಯಾಗಿಸಲು ನಡೆಯುವ ಚುನಾವಣೆಯಾಗಿದೆ. ನಿರ್ಣಾಯಕ ಕಾಲ ಘಟ್ಟದಲ್ಲಿದ್ದು ಮೋದಿಯವರ ಯೋಜನೆಯ ಬಗ್ಗೆ ಮನೆ ಮನೆ ಪ್ರಚಾರ ಮಾಡಿ ನೆನೆಪಿಸಬೇಕು. ದೇಶದ ಭವಿಷ್ಯದ ದೃಷ್ಠಿಯಲ್ಲಿ ತಾಯಂದಿರು ಪರಿಣಾಮಕಾರಿಯಾಗಿ ಪ್ರಚಾರ ಮಾಡಬೇಕು. ದೇಶದ ಭವಿಷ್ಯ ನಿರ್ಧರಿಸುವ ಶಕ್ತಿಯಿರುವುದು ಪ್ರಧಾನಿ ಮೋದಿಯವರಿಗೆ ಮಾತ್ರ. ನಮ್ಮ, ನಮ್ಮ ಮಕ್ಕಳ, ಸಂಸ್ಕೃತಿ ದೇಶದ ಭವಿಷ್ಯ ಉಳಿಸಿ ಬೆಳೆಸುವ ಶಕ್ತಿಯಿರುವುದು ಮೋದಿಯವರಿಗೆ ಮಾತ್ರವಾಗಿ ಮತ್ತೆ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದರು. ಬಿಜೆಪಿಯು ಮಹಿಳೆಯರಿಗೆ ಗೌರವ ನೀಡಿದ ಪಕ್ಷವಾಗಿದೆ. ಪ್ರಧಾನಿ ಮೋದಿಯವರ ಎಲ್ಲಾ ಯೋಜನೆಗಳು ಮಹಿಳೆಯರನ್ನು ಕೇಂದ್ರೀಕೃತವಾಗಿದೆ. ಬಡವರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದನೆ ನೀಡಿದ್ದಾರೆ. ಎಲ್ಲಿಯೂ ತುಷ್ಟೀಕರಣ ಮಾಡಿಲ್ಲ. ಮೋದಿಯವರ ಆಡಳಿತದಲ್ಲಿ ಹಿಂದುತ್ವದ ಭದ್ರಕೋಟೆಯಲ್ಲಿ ಅವಕಾಶ ನೀಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ನನ್ನಂತ ಸೈನಿಕರಿಗೆ ಅವಕಾಶ ದೊರೆಯುವುದು ಬಿಜೆಪಿಯಲ್ಲಿ ಮಾತ್ರ. ಮೋದಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಜನತೆಯ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಹಿಂದುತ್ವಕ್ಕೆ ಬದ್ದತೆ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮಹಿಳಾ ಮೋರ್ಚಾದ ಜಿಲ್ಲಾ ಸಂಯೋಜಕಿ ಕಸ್ತೂರಿ ಪಂಜ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರವರ ವಿಜಯ ಘೋಷಣೆ ನಿನ್ನೆ ಸುಳ್ಯದಲ್ಲಿ ಮೊಳಗಿದೆ. ಇಂದು ಪುತ್ತೂರಿನಲ್ಲಿ ನಡೆದಿದೆ. ಈ ಭಾರಿಯೂ ಅತ್ಯಧಿಕ ಮತಗಳ ಅಂತರದ ವಿಜಯ ಪತಾಕೆ ಹಾರಿಸಬೇಕು. ಪ್ರಧಾನಿ ಮೋದಿಯವರು ವಿಕಸಿತ ಭಾರತಕ್ಕೆ ಜಿಲ್ಲೆಯ ಪುಷ್ಪವಾಗಿ ಬ್ರಿಜೇಶ್ ಚೌಟರವನ್ನು ಕಳುಹಿಸಿಬೇಕು. ಸಂಸದ ನಳಿನ್ ಕುಮಾರ್ ಕಟೀಲ್ ರೂ.1ಲಕ್ಷ ಕೋಟಿ ಅನುದಾನ ತಂದು ಉತ್ತಮ ಅಭಿವೃದ್ಧಿ ಕೆಲಸಗಳಾಗಿದೆ. ಆ ಖುಶಿಯಲ್ಲಿ ಮತ್ತೆ ಬ್ರಿಜೇಶ್ ಚೌಟರವರನ್ನು ಐತಿಹಾಸಿಕ ಅಂತರಗಳ ಮತಗಳಲ್ಲಿ ಗೆಲ್ಲಿಸಿ ಕಳುಹಿಸಿಕೊಡಬೇಕು. ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಕೆಲಸ ಚೌಟರವರ ಮುಖಾಂತರ ನಡೆಯಬೇಕು. ಮೋದಿಯವರು ನೀಡಿರುವ ಯೋಜನೆಗಳಿಗಾಗಿ ನಮ್ಮ ಕೆಲಸವಾಗಬೇಕು. ಇದು ದೇಶದ ಚುನಾವಣೆಯಾಗಿದ್ದು ಜಗತ್ತು ನೋಡುವ ಚುನಾವಣೆಯಾಗಿದೆ. ಮೂರನೇ ಬಾರಿಗೆ ಮೋದಿಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ನಮ್ಮ ಮನೆ ಮಗ ಬ್ರಿಜೇಶ್ ಚೌಟ ಸಂಸತ್ತಿನಲ್ಲಿರಬೇಕು ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸೈನಿಕನಾಗಿ ದೇಶ ಸೇವೆ ಮಾಡಿದ ಬ್ರಿಜೇಶ್ ಚೌಟರವರಿಗೆ ಪಕ್ಷ ಉನ್ನತ ಸ್ಥಾನ ನೀಡಲು ಲೋಕ ಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಮಾಡಿದ್ದಾರೆ. ಚೌಟರವರಿಗೆ ನಾವು ನಮ್ಮ ತಾಲೂಕು, ಬೂತ್‌ಗಳಲ್ಲಿ ಹೆಚ್ಚ ಮತ ಚಲಾವಣೆಯಾಗುವಂತೆ ಮಾಡಬೇಕು. ನಮ್ಮದು ಗುರಿ ಒಂದೇ ದೇಶ ಮುಖ್ಯ ಎಂದರು. ನಳಿನ್ ಕುಮಾರ್ ಕಟೀಲ್ ಮೂರು ಬಾರಿಯೂ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ನರೇಂದ್ರ ಮೋದಿಯವರ ಅಧಿಪತ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅವರ ಸಾಧನೆಯನ್ನು ಗುರಿಯಾಗಿಸಿ ಬಳಸಿಕೊಳ್ಳಬೇಕು. ವಿವಿಧ ಯೋಜನೆಗಳನ್ನು ತಂದಿರುವ ಮೋದಿಯವರು ಮಹಿಳೆಯ ಕಣ್ಣೀರು ಒರೆಸುವ ಕೆಲಸ ಮಾಡಿದ್ದು ಅದಕ್ಕೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮೋರ್ಚಾದ ಸಂಸತ್‌ಗೆ ಕಳುಹಿಸುತ್ತಿರುವುದು ನಾವೆಲ್ಲರ ಪುಣ್ಯವಂತರು. ಹೀಗಾಗಿ ಅವರ ಗೆಲುವಿಗಾಗಿ ಮಹಿಳೆಯರು ಕೈಜೋಡಿಸಬೇಕು. ಮಹಿಳೆಯರು ಪಕ್ಕದ ಮನೆಯವರಲ್ಲಿ ಆಡಳಿತಾತ್ಮಕವಾಗಿ ಮಾತನಾಡಿಕೊಳ್ಳುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಬಗ್ಗೆ ಚಿಂತಿಸಬೇಕು ಎಂದರು. ನರೇಂದ್ರ ಮೋದಿಯವರು ಪ್ರಧಾನಿಯಾಗುವ ಮೊದಲು ನೆಮ್ಮದಿಯಿಂದ ಉಸಿರು ಬಿಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯದಲ್ಲಿ ಕಳೆದ ಹತ್ತು ತಿಂಗಳಿನಿಂದ ಮತ್ತೆ ಅನುಭವವಾಗುತ್ತಿದೆ. ಹೀಗಾಗಿ ಮತ್ತೆ ಅಂತಹ ತಪ್ಪ ಮಾಡಬಾರದು. ನಾವು ಮತ ಹಾಕುವ ಜೊತೆಗೆ ಇತರ ಹತ್ತು ಮಂದಿಯನ್ನು ಬಿಜೆಪಿಗೆ ಮತಹಾಕುವಂತೆ ಮಾಡುವ ಮೂಲಕ ಬ್ರಿಜೇಶ್ ಚೌಟರವರನ್ನು ಅತ್ಯಧಿಕ ಮತಗಳಲ್ಲಿ ಜಯಗಳಿಸುವ ಸಂಸತ್‌ಗೆ ಕಳುಹಿಸುವ ಇತಿಹಾಸ ನಿರ್ಮಿಸಬೇಕು ಎಂದರು.

ಬಿಜೆಪಿ ರಾಜ್ಯ ಪ್ರಭಾರಿ ಸುಲೋಚನಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವೀಣ್ ನೆಟ್ಟಾರುರವರನ್ನು ಪಿಎಫ್‌ಐನವರು ಕೊಲೆ ಮಾಡಿದ್ದು ಅದರದ್ದೇ ಅಂಗ ಸಂಸ್ಥೆಯಾಗಿರುವ ಎಸ್‌ಡಿಪಿಐಯವರ ಜೊತೆಗೆ ಕಾಂಗ್ರೆಸ್ ಈ ಭಾರಿ ಹೊಂದಾಣಿಕೆ ಮಾಡಿಕೊಂಡಿದ್ದು ಪ್ರವೀಣ್ ನೆಟ್ಟಾರು ಪ್ರಕರಣದ ಬಗ್ಗೆ ಪದ್ಮರಾಜ್‌ರವರಿಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮನೆ, ಆರ್ಥಿಕ ಸೌಲಭ್ಯವನ್ನು ಸಂಸದ ನಳಿನ್ ಕುಮಾರ್ ಒದಗಿಸಿಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡಲು ಸಹಾನುಭೂತಿ ಬೇಕು. ನಿಮಗೆ ನಾಚಿಕೆಯಾಗಬೇಕು. ಕಾಂಗ್ರೆಸ್‌ನ ಈ ವಿಚಾರವನ್ನು ಮನೆ ಮನೆ ತಿಳಿಸಬೇಕು. ನೋಟಾಗೆ ಮತ ಹಾಕಿದರೆ ಪರಿಹಾರ ಸಿಗುವುದಿಲ್ಲ. ಸಮಸ್ಯೆಗೆ ನೋಟಾ ಪರಿಹಾರವಲ್ಲ. ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆರಿಸಿಕೊಟ್ಟು ಅವರನ್ನು ಮೇಲೆ ಕುಳ್ಳಿರಿಸುವ ಮೂಲಕ ಪರಿಹಾರ ಕಂಡುಕೊಳ್ಳ ಬೇಕು ಎಂದ ಅವರು ಸಮರ್ಪನಾ ಭಾವದ ಯುವಕನಾಗಿರುವ ಬ್ರಿಜೇಶ್ ಚೌಟರವರನ್ನು ಗೆಲ್ಲಿಸಲು ನಾವು ಶ್ರಮಿಸಬೇಕು ಎಂದರು.

ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಜಿಲ್ಲಾ ಸಂಚಾಲಕಿ ಕಸ್ತೂರಿ ಪಂಜ, ಧನಲಕ್ಷ್ಮೀ ಗಟ್ಟಿ, ಮಹಿಳಾ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಲಖಿತಾ ಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಯಶಸ್ವಿನಿ ಶಾಸ್ತ್ರೀ, ಜಯಶ್ರೀ ಎಸ್. ಶೆಟ್ಟಿ, ಮೀನಾಕ್ಷಿ ಮಂಜುನಾಥ, ತ್ರಿವೇಣಿ ಪೆರ‍್ವೋಡಿ, ಶಯನಾ ಜಯಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಸಭಾ ಸದಸ್ಯೆ ಗೌರಿ ಬನ್ನೂರು ಹಾಗೂ ಉಪ್ಪಿನಂಗಡಿ ಗ್ರಾ.ಪಂ ಸದಸ್ಯೆ ಉಷಾ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಮಂಡಲದ ಮಹಿಳಾ ಮೊರ್ಚಾದ ಅಧ್ಯಕ್ಷೆ ಜಯಶ್ರೀ ವಂದಿಸಿದರು.

ಮೋದಿಗೆ ಮತನೀಡಿ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ…
ಮತದಾನ ನಡೆಯುವ ಎ.26 ಜಿಲ್ಲೆಯಲ್ಲಿ ಬಹಳಷ್ಟು ಉತ್ತಮ ದಿನ. ಆ ದಿನ ಸಾಕಷ್ಟು ಮದುವೆ ಕಾರ್ಯಕ್ರಮಗಳಿವೆ. ಮದುವೆ ಕಾರ್ಯಕ್ರಮಗಳಿಗೆ ಹೋಗುವವರೆಲ್ಲರೂ ಮೋದಿಯವರಿಗೆ ಮತ ಹಾಕಿ ಕಾರ್ಯಕ್ರಮಗಳಿಗೆ ಹೋಗುವಂತೆ ಮಾಳವಿಕಾ ಅವಿನಾಶ್ ವಿನಂತಿಸಿದರು.

LEAVE A REPLY

Please enter your comment!
Please enter your name here