ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 63ನೇ ವರ್ಷದ ಏಕಾಹ ಭಜನಾ ಮಹೋತ್ಸವ ಏ.12ರಿಂದ ಏ.13ರ ಮುಂಜಾನೆಯವರೆಗೆ ನಡೆಯಲಿದೆ.
ಏ.12ರಂದು ಮುಂಜಾನೆ ದೀಪಾರಾಧನೆ ಭಜನೆ ಪ್ರಾರಂಭ, ಬಳಿಕ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದುರ್ಗಾಪೂಜೆ ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಳಕ್ಕೆ ಭಜನಾ ಮೆರವಣಿಗೆ ನಡೆಯಲಿದ್ದು ಸುಬ್ರಹ್ಮಣ್ಯ ಮಠಾದೀಶ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರನ್ನು ಉಲ್ಪೆ ಮೆರವಣಿಗೆಯಲ್ಲಿ ತಾಲೀಮು, ಕೀಲು ಕುದುರೆ ಹಾಗೂ ಚೆಂಡೆ ಮೇಳದೊಂದಿಗೆ ಕರೆತರಲಾಗುವುದು, ಬಳಿಕ ಶ್ರೀ ದೇವರಿಗೆ ಉಲ್ಪೆ ಸಮರ್ಪನೆ, ಯತಿಗಳಿಂದ ಆಶೀರ್ವಚನ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಏ.13ರಂದು ಭಜನೆ ಮಂಗಲ ನಡೆದು ನವಕ ಶುದ್ಧಿ ಕಲಶ ನಡೆಯಲಿದೆ ಎಂದು ಏಕಾಹ ಭಜನಾ ಸಮಿತಿ, ಭಜನಾ ಮಂಡಳಿ ಸಮಿತಿ ಹಾಗೂ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.