





ಉಪ್ಪಿನಂಗಡಿ: ಕೆಲಸಕ್ಕೆಂದು ಮನೆ ಬಿಟ್ಟು ತೆರಳಿದ ಇಲ್ಲಿನ ಪೆರಿಯಡ್ಕದ ಬೊಳ್ಳಾವು ನಿವಾಸಿ ವಸಂತ ಪೂಜಾರಿ (45) ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ವಸಂತ ಪೂಜಾರಿಯವರು ತನ್ನ ಕೆಎ 21 ವೈ 5456 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಹೋಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ ಎಂದಿನಂತೆ ಕೆಲಸಕ್ಕೆಂದು ಎ.9ರ ಬೆಳಗ್ಗೆ ಮನೆ ಬಿಟ್ಟು ತೆರಳಿದವರು ಕೆಲಸಕ್ಕೂ ಹೋಗದೇ, ವಾಪಸ್ ಸಂಜೆ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ಬಗ್ಗೆ ಅಥವಾ ಇವರ ದ್ವಿಚಕ್ರದ ಬಗ್ಗೆ ಮಾಹಿತಿ ದೊರೆತವರು ಸುರೇಶ (974160019) ಸಂದೀಪ್ (9148523182), ಚಂದ್ರಶೇಖರ (9741865562) ಇವರನ್ನು ಸಂಪರ್ಕಿಸಬೇಕೆಂದು ಇವರ ಮನೆಯವರು ಮನವಿ ಮಾಡಿಕೊಂಡಿದ್ದಾರೆ.














