ಕರುವೇಲು ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

0

ಉಪ್ಪಿನಂಗಡಿ: ಕರುವೇಲು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದಂಗವಾಗಿ ಎ.10ರಂದು ಸಾಮೂಹಿಕ ಪ್ರಾರ್ಥನೆ ಈದ್ ಹಾಗೂ ಖುತುಬ್ ಪಾರಾಯಣ ಸ್ಥಳೀಯ ಖತೀಬ್ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ ನೇತೃತ್ವದಲ್ಲಿ ನಡೆಯಿತು.


ಸರ್ವ ಜನತೆಗೆ ಶುಭಾಶಯ ಕೋರಿ ಮಾತನಾಡಿದ ಸೈಯದ್ ಅನಸ್ ಹಾದೀ ತಂಙಳ್ ಅಲ್ ಅಝ್ಹರಿ, ಒಂದು ತಿಂಗಳ ಉಪವಾಸವು ಉಳಿದ ತಿಂಗಳಲ್ಲಿ ದೇವರ ಭಕ್ತಿಯಿಂದ ಮಾನವನಾಗಿ ಬದುಕಲು ಪ್ರೇರಣೆಯಾಗಲಿ ಎಂದು ಹಾರೈಸಿದರು. ಜಮಾಅತ್ ಅಧ್ಯಕ್ಷ ಉಮರಬ್ಬ ತೋಜ, ದಿಕ್ರ್ ಹಲ್ಖಾ ಕಮಿಟಿ ಅಧ್ಯಕ್ಷ ಶರೀಫ್ ಮೇಸ್ತ್ರಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ಲತೀಫ್ (ಮುನ್ನ) ಸೇರಿದಂತೆ ಹಾಗೂ ಸರ್ವ ಪದಾಧಿಕಾರಿಗಳು, ಮುಸ್ಲಿಂ ಬಾಂಧವರು ಭಾಗವಹಿಸಿ ಪರಸ್ಪರ ಪ್ರೀತಿ ಸೌಹಾರ್ದ ಹಂಚಿ, ತಮ್ಮನ್ನು ಅಗಲಿದ ಕುಟುಂಬಸ್ಥರನ್ನು ಸ್ಮರಿಸಿ ಈದುಲ್ ಫಿತ್ರ್ ಆಚರಿಸಿದರು.

LEAVE A REPLY

Please enter your comment!
Please enter your name here