ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ’ಈದುಲ್ ಫಿತ್ರ್’ ಆಚರಣೆ

0

ನೆಲ್ಯಾಡಿ: ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸ್ಜಿದ್‌ನಲ್ಲಿ ಸಂಭ್ರಮ, ಸಡಗರದಿಂದ ಎ.10ರಂದು ’ಈದುಲ್ ಫಿತ್ರ್’ ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಿದರು.
ಖತೀಬರಾದ ಬಹು| ಶೌಕತಾಲಿ ಅಮಾನಿ ಅವರು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿಶೇಷ ನಮಾಝ್, ಪ್ರವಚನ ನಡೆಯಿತು.

ಮುಸ್ಲಿಂ ಬಾಂಧವರು ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿ ಅಧ್ಯಕ್ಷರಾದ ಹನೀಫ್ ಸಿಟಿ, ಎನ್.ಎಸ್.ಸುಲೈಮಾನ್, ರಫೀಕ್ ಬೈಲು, ಇಲ್ಯಾಸ್ ಎಸ್., ಉಮ್ಮರ್ ತಾಜ್, ವಕೀಲರು ಮತ್ತು ನೋಟರಿ ಇಸ್ಮಾಯಿಲ್ ನೆಲ್ಯಾಡಿ, ರಫೀಕ್ ಅಲಂಪಾಡಿ, ನಾಝೀಂ ಸಾಹೇಬ್, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ಜಬ್ಬಾರ್, ಮೊಹಮ್ಮದ್ ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here