ಬಡಗನ್ನೂರು ಸಾಮೂಹಿಕ ಹಟ್ಟುಹಬ್ಬ ಆಚರಣೆ

0

ಬಡಗನ್ನೂರು: ಬಡಗನ್ನೂರು ಇಲ್ಲಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಾಮೂಹಿಕ ಹುಟ್ಟುಹಬ್ಬದ ಅಚರಣೆ ಮಾಡುವ ಮೂಲಕ ವಿನೂತನ ಕಾರ್ಯಕ್ರಮ ಏ.8ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ  ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಸಾಮೂಹಿಕ ಹುಟ್ಟುಹಬ್ಬದ ಆಚರಣೆಯು ವಿದ್ಯಾರ್ಥಿಗಳಲ್ಲಿ ಸಹೋದರತ್ವದ ಭಾವನೆಯನ್ನು ಬೆಳೆಸುತ್ತದೆ. ಸರ್ವಧರ್ಮದಲ್ಲಿರುವ ಸದ್ಗುಣಗಳನ್ನು ರೂಢಿಸಿಕೊಂಡು, ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು ಮತ್ತು ಮಕ್ಕಳು ಮತ್ತು ಮಕ್ಕಳು ಮತ್ತು ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಭಾರ ಮುಖ ಶಿಕ್ಷಕಿ ಹರಿಣಾಕ್ಕಿ ಎ, ಜಿ.ಪಿಟಿ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಭೂದೇವಿ ಜ್ಞಾನ ದೀಪ ಶಿಕ್ಷಕಿ ಸೌಮ್ಯ ಸಹಕರಿಸಿದರು.

ಜನವರಿ ತಿಂಗಳಿಂದ ಮಾರ್ಚ್ ತಿಂಗಳೊಳಗೆ ಜನಿಸಿದ ಒಟ್ಟು 30 ವಿದ್ಯಾರ್ಥಿಗಳ ಹುಟ್ಟು ಹಬ್ಬ ಅಚಾರಣೆ ಮಾಡಲಾಯಿತು. ಕಾರ್ಯಕ್ರಮ ಬಳಿಕ ಹುಟ್ಟು ಹಬ್ಬ ಆಚರಿಸುವ ಮಕ್ಕಳ ಪೋಷಕರಿಂದ ಸಿಹಿ  ಕೈತುತ್ತು ನೀಡುವ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here