ಪುತ್ತೂರು: ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಅಕ್ವೇರಿಯಂ ಮೀನು ಸಾಕಾಣಿಕೆಯ ಕುರಿತು ತರಬೇತಿ ಕಾರ್ಯಾಗಾರ ಏ.12ರಂದು ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ಮತ್ಸಕನ್ಯಾ ಅಕ್ವೇರಿಯಂನ ಶಶಿಕುಮಾರ್ ಕಾರ್ಕಳರವರು ಮನೆಯಲ್ಲಿರುವ ಅಲ್ಪ ಸ್ವಲ್ಪ ಜಾಗದಲ್ಲಿ ಟರ್ಪಲ್ ತೊಟ್ಟಿ, ಮೀನಿನ ಬಾಕ್ಸ್, ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳಲ್ಲಿ ಅಕ್ವೇರಿಯಂ ಮೀನು ಸಾಕಿ ಸಂಪಾದನೆ ಗಳಿಸುವ ಕುರಿತು ಮಾಹಿತಿ ನೀಡಿದರು.
ಡಾ.ಪಿ.ಕೆ.ಎಸ್.ಭಟ್, ಅಂಚಿತ್ ಮೊಟ್ಟೆತ್ತಡ್ಕ, ಅಬ್ಬಾಸ್ ಕೆದಿಲ, ಜಯರಾಮ ಉಪ್ಪಿನಂಗಡಿ, ಜಗನ್ನಾಥ ಮುರ, ತೇಜಸ್ ರೆಂಜ, ಹರ್ಷದೀಪ್ ರೆಂಜ, ಶಮಂತ್ ಸಂಪ್ಯ, ಸುದ್ದಿ ಪ್ರತಿನಿಧಿಯಾದ ಪ್ರವೀಣ್ ಚೆನ್ನಾವರ ಪಾಲ್ತಾಡಿ, ಅರಿವು ಕೃಷಿ ಕೇಂದ್ರದ ಚೈತ್ರಾ ಮಧುಚಂದ್ರ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ
ಮುಂದಿನ ದಿನಗಳಲ್ಲಿ ಬೇಸಿಗೆ ರಜೆ ಇರುವ ಕಾರಣ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಶುಲ್ಕದೊಂದಿಗೆ ತರಬೇತಿ ನಡೆಸಲು ಯೋಚಿಸಿದ್ದೇವೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ತರಬೇತಿಯೊಂದಿಗೆ ಉಚಿತ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು 6364570738, 8050293990, 8050294039 ಸಂಪರ್ಕಿಸಬಹುದು ಎಂದು ಮತ್ಸ್ಯಕನ್ಯಾ ಅಕ್ವೇರಿಯಂನ ಶಶಿಕುಮಾರ್ ಕಾರ್ಕಳ ತಿಳಿಸಿದ್ದಾರೆ.