ಕೆಯ್ಯೂರು: ಕೆಯ್ಯೂರು ಗ್ರಾಮದ ಕೊಳ್ತಿಗೆ ವಿಠಲ ರೈಯವರ ಶ್ರದ್ಧಾಂಜಲಿ ಸಭೆಯು ಎ.11ರಂದು ಉಪ್ಪಿನಂಗಡಿ ಶ್ರೀ ಸಹಶ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ಸುದೀರ್ಘ ಕಾಲದ ಮಾಜಿ ಮೊಕ್ತೇಸರಾಗಿ,ಹಾಗೂ ಕೆಯ್ಯೂರು ಮಾಡಾವು ಹಾಲು ಉತ್ಪಾದಕರ ಸಂಘದ ಸ್ಥಾಪಾಕಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ, ಉಪನ್ಯಾಸಕ ನರೇಂದ್ರ ರೈ ದೇರ್ಲ ನುಡಿ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿತೈಷಿಗಳು, ಬಂಧುಗಳ ಜತೆ ಒಡನಾಟದ ‘ನೆನಪಿನ ಪುಟಗಳು’ ಎಂಬ ಭಾವಚಿತ್ರ ಸಂಕಲನದ ಪ್ರದರ್ಶನ ಮಾಡಲಾಯಿತು.
ಪತ್ನಿ ತಾರಾ ರೈ, ಮಗಳು ಅನಿತಾ ರೈ, ಮಗ ನ್ಯಾಯವಾದಿ ಕೃಷ್ಣಪ್ರಸಾದ್ ರೈ ಕಣಿಯಾರು, ಅಳಿಯ ನಿವೃತ್ತ ಡಿವೈಎಸ್ಪಿ ಬಾಸ್ಕರ ರೈ ಎನ್.ಜಿ ಗುಂಡ್ಯಡ್ಕ, ಸೊಸೆ ಭವ್ಯ ರೈ ಮೊಮ್ಮಕ್ಕಳಾದ ಅನುಷಾ, ಸಾಹಿತ್, ಸಂಭ್ರಮ್ ಮತ್ತು,ಕುಟುಂಬಸ್ಥರು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ಹಾಗೂ ಅನೇಕ ಗಣ್ಯರು, ಹಿತೈಷಿಗಳು, ಬಂಧು ಮಿತ್ರರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ವಿಠಲ ರೈ ಕಣಿಯಾರು ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.