ಕೋಡಿಂಬಾಳ: ನದಿಯಲ್ಲಿ ಸತ್ತ ಮೊಸಳೆ

0

ಕಡಬ: ಕುಮಾರಧಾರ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಚರಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆ ಅಡಿಯಲ್ಲಿ ಮೊಸಳೆಯೊಂದು ಸತ್ತು ಬಿದ್ದಿರುವ ಘಟನೆ ವರದಿಯಾಗಿದೆ.

ಈ ಸೇತುವೆ ಅಡಿ ಭಾಗದಲ್ಲಿ ಕುಮಾರಧಾರ ನದಿ ಹರಿಯುತ್ತಿದ್ದು ನೀರು ಕಲುಷಿತಗೊಂಡು ಜಲಚರಗಳ ಸಹಿತ ಮೊಸಳೆ ಸತ್ತು ಹೋಗಿದೆ ಎನ್ನಲಾಗುತ್ತಿದೆ. ಈ ನದಿಯಲ್ಲಿ ನೀರಿನ ಹರಿವು ನಿಂತಿದ್ದು ಅಲ್ಲಲ್ಲಿ ನೀರು ಸಂಗ್ರಹಗೊಂಡಿದೆ. ನೀರಿನ ಅಭಾವದಿಂದಲೇ ಮೊಸಳೆ ಸತ್ತಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಹಿ ನೀರಿನಲ್ಲಿ ಮೀನು ಹಿಡಿಯಲು ಕೆಲವರು ಕೆಮಿಕಲ್ ಮಿಶ್ರಿತ ದ್ರಾವಣ ಹಾಕುತ್ತಿರುವುದರಿಂದ ಜಲಚರಗಳಿಗೆ ಮಾರಕವಾಗಿದೆ ಎಂದು ಸುದ್ದಿ ಹರಡಿದೆ.

ಸೇತುವೆ ಕೆಳ ಭಾಗದ ಸುಮಾರು 200 ಮೀ ಅಂತರದಲ್ಲಿ ನಾಕೂರು ಗಯವಿದ್ದು ಅಲ್ಲಿ ಮಹಷಿರ್‌ ಜಾತಿಯ ದೇವರ ಮೀನುಗಳ ಸಮೂಹವೇ ಇದೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here