ಪುತ್ತೂರು: ಇಂಡೋ ಶ್ರೀಲಂಕಾ ವಾರ್ಷಿಕ ಕ್ಯಾನೋ ಸ್ಪ್ರಿಂಟ್ಸ್ 2024 ಆಡಮ್ಸ್ ಬ್ರಿಡ್ಜ್ ಪ್ಯಾಡಲ್ ಸವಾಲಿನಲ್ಲಿ ಭಾರತವನ್ನು ಪ್ರತಿನಿಧಿಸಲು ಸಂತ ಫಿಲೋಮಿನಾ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ತ್ರಿಶೂಲ್ ಮತ್ತು ಸ್ವೀಕ್ರಿತ್ ಆನಂದ್‌ರವರು ಆಯ್ಕೆಯಾಗಿದ್ದಾರೆ. ಸ್ಪರ್ಧೆಯು ಎ.100 ಮತ್ತು 11 ರಂದು ಶ್ರೀಲಂಕಾದಲ್ಲಿ ನಡೆಯುತ್ತಿದೆ.
ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ರಾಷ್ಟ್ರೀಯ ಅಸೋಸಿಯೇಷನ್ , ಶ್ರೀಲಂಕಾ ನೇವಿ ಮತ್ತು ಇಂಡಿಯನ್ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಸೋಸಿಯೇಷನ್ (LNEC) ಸಹಯೋಗದೊಂದಿಗೆ ಐತಿಹಾಸಿಕ ಕ್ರೀಡಾಕೂಟ ಮೊದಲ ಬಾರಿಗೆ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿದೆ.
ಅಥ್ಲೀಟ್‌ಗಳು ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿವರೆಗೆ ಪ್ಯಾಡಲ್ ಮಾಡಲಿದ್ದಾರೆ. ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕ್ರೀಡಾಪಟುಗಳನ್ನು ಸೌಹಾರ್ದ ಸ್ಪರ್ಧೆ, ಸಾಂಸ್ಕೃತಿಕ ವಿನಿಮಯ ಮತ್ತು ದೇಶದಲ್ಲಿ ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉತ್ಸಾಹದಲ್ಲಿ ಒಟ್ಟುಗೂಡಿಸುವ ಗುರಿಯನ್ನು ಈ ಸ್ಪರ್ಧೆ ಹೊಂದಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ಬಿ.ಎ ವ್ಯಾಸಂಗ ಮಾಡುತ್ತಿರುವ ತ್ರಿಶೂಲ್ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಶಿವ ಗೌಡ ಮತ್ತು ನಳಿನಿ ದಂಪತಿಯ ಪುತ್ರ.
ಸ್ವೀಕ್ರಿತ್ ಆನಂದ್ ರವರು ಬೊಳುವಾರು ಮೇಘಾ ಗ್ಲಾಸ್ ಮಾಲಕ ಆಸ್ಕರ್‌ಆನಂದ್ ಹಾಗೂ ರೀತಾ ಆನಂದ್ ದಂಪತಿಯ ಪುತ್ರ.
ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರಾಗಿದ್ದಾರೆ. ಅವರು ಕೋಚ್ ಪಾರ್ಥ ವಾರಣಾಶಿ, ನಿರೂಪ್ ಜಿ ಆರ್, ರೋಹಿತ್ ಪ್ರಕಾಶ್ ಮತ್ತು ದೀಕ್ಷಿತ್ ಆರ್ ಅವರ ಅಡಿಯಲ್ಲಿ ಬಾಲವನ ಈಜುಕೊಳದಲ್ಲಿ ಈಜು ಅಭ್ಯಾಸ ಮಾಡುತ್ತಿದ್ದಾರೆ. ಕೋಚ್ ರೋಹಿತ್ ಪ್ರಕಾಶ್‌ರವರು ಭಾರತ ಕಯಾಕಿಂಗ್ ತಂಡದ ವೀಕ್ಷಕರಾಗಿದ್ದಾರೆ. ದಕ್ಷಿಣ ಕನ್ನಡದ ಈಜುಪಟುಗಳು ಇಂತಹ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.