ಭವಿಷ್ಯ ಅರಸಿ ಬರುವ ವಿದ್ಯಾರ್ಥಿಗಳ ಬಾಳಿಗೆ ದೀವಿಗೆ ಪುತ್ತೂರಿನ ಅಕ್ಷಯ ಕಾಲೇಜು

0

ಪುತ್ತೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಉದ್ಯೋಗ ವೃತ್ತಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಕ್ಷಯ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ವರವಾಗಿರುವ ಈ ವಿದ್ಯಾಸಂಸ್ಥೆ ಕಲಿಕಾ ಗುಣಮಟ್ಟ, ಫಲಿತಾಂಶ, ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದಿದೆ.


ಉದ್ಯೋಗ ಪೂರಕ ಕೋರ್ಸುಗಳು:
ಅಕ್ಷಯ ಕಾಲೇಜಿನಲ್ಲಿ ಬಿ.ಕಾಂ ವಿತ್ ಏವಿಯೇಶನ್ & ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಬಿಎಸ್ಸಿ ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್ ಬಿಸಿಎ ಡಾಟ ಅನಾಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಸೈಬರ್ ಸೆಕ್ಯೂರಿಟಿ, ಬಿಬಿಎಯ ಸಪ್ಲೈ ಚೈನ್ & ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್, ಬಿಎಚ್‌ಎಸ್ ಬ್ಯಾಚುಲರ್ ಇನ್ ಹಾಸ್ಪಿಟಾಲಿಟಿ ಸೈನ್ಸ್(Hotel Management), ಬಿ.ಎ ವಿತ್ ಫ್ಯಾಶನ್ ಡಿಸೈನ್, ಮೇಕಪ್ & ಹೇರ್‌ಸ್ಟೈಲ್, ಏವಿಯೇಶನ್ ಪದವಿಗಳನ್ನಿಲ್ಲಿ ಹಲವು ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಪಡೆಯಬಹುದಾಗಿದೆ.


ವಿಫುಲ ಉದ್ಯೋಗ ಅವಕಾಶ
ಮಂಗಳೂರು ವಿ.ವಿ ಸಂಯೋಜನೆ ಪಡೆದಿರುವ ಅಕ್ಷಯ ಕಾಲೇಜಿನಲ್ಲಿ ಫ್ಯಾಶನ್ ಡಿಸೈನ್ ಪದವಿಯಿಂದ ಖಚಿತ ಉದ್ಯೋಗದ ಭರವಸೆಯಿದೆ. ಫ್ಯಾಶನ್ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಫ್ಯಾಶನ್ ಡಿಸೈನರ್‌ಗಳಿಗೆ ವಿಫುಲ ಅವಕಾಶಗಳಿವೆ. ಮಾಡೆಲಿಂಗ್, ಸಿನಿಮಾರಂಗ, ವಸ್ತ್ರವಿನ್ಯಾಸ, ರೀಟೇಲ್ ಬಯರ್, ರಿಟೇಲ್ ಮ್ಯಾನೇಜರ್, ಮರ್ಚಂಡೈಸರ್‌ಗಳಿಗೆ ದೇಶ ವಿದೇಶಗಳ ಕಂಪೆನಿಗಳಲ್ಲಿ ತಿಂಗಳಿಗೆ ಲಕ್ಷಕ್ಕಿಂತಲೂ ಅಧಿಕ ಸಂಬಳ ಸಿಗುತ್ತದೆ.


ಪ್ರಸ್ತುತ ಇಂಟೀರಿಯರ್ ಡಿಸೈನ್ ಔದ್ಯೋಗಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದು, ವಿದ್ಯಾರ್ಥಿಗಳು ಹೊಸ ವೃತ್ತಿ ಜೀವನದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳಾಂಗಣ ವಿನ್ಯಾಸಗಾರರಿಗೆ ವಿಫುಲವಾದ ಬೇಡಿಕೆ ಇದ್ದು, ವಾಸ್ತುಶಿಲ್ಪ ಸಂಸ್ಥೆಗಳು, ಪೀಠೋಪಕರಣ ಕಂಪೆನಿಗಳು, ನಿರ್ಮಾಣ ಸಂಸ್ಥೆಗಳು, ಹೋಟೆಲ್, ರೆಸಾರ್ಟ್, ಕಾರ್ಪೋರೇಟ್ ವಲಯ, ಸ್ವಯಂ ಉದ್ಯೋಗ ಹೀಗೆ ಬಹುತೇಕ ಎಲ್ಲ ಕ್ಷೇತ್ರ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಇಂಟೀರಿಯರ್ ಡಿಸೈನರ್‌ಗಳ ಬೇಡಿಕೆ ಇದೆ.
ಬಿ.ಕಾಂ ವಿತ್ ಎವಿಯೇಶನ್ & ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಪದವಿ ಗಳಿಸಿದಲ್ಲಿ ಏರ್‌ಪೋರ್ಟ್ ಗ್ರೌಡ್ ಲೆವೆಲ್ ಸ್ಟಾಫ್, ಕ್ರೂಝ್ ಮೆಂಬರ್ ಮೊದಲಾದ ಹುದ್ದೆಗಳನ್ನು ಪಡೆಯಬಹುದು. ಹಾಸ್ಪಿಟಾಲಿಟಿ ಮ್ಯಾನೇಜ್‌ಮೇಂಟ್ ಮೂಲಕ 3 ಸ್ಟಾರ್, 5 ಸ್ಟಾರ್ ಹೋಟೆಲ್‌ಗಳಲ್ಲಿ ಉತ್ತಮ ಉದ್ಯೋಗ ಪಡೆಯಬಹುದಾಗಿದೆ.


ಬಿಎಸ್ಸಿ ಹಾಸ್ಪಿಟಾಲಿಟಿ ಸಯನ್ಸ್(Hotel Management) ಪದವಿಯಿಂದ ಕ್ಯಾಬಿನ್ ಕ್ರೂ, ಏರ್‌ಲೈನ್ಸ್, ಟೂರಿಸಂ, 5 Star & 7 Star ಹೋಟೇಲ್ ಉದ್ಯಮಗಳಲ್ಲಿ ಹಾಗೂ ವಿದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪೀಲ್ಡ್ ಮ್ಯಾನೇಜರ್ ಮೊದಲಾದ ಉನ್ನತ ಉದ್ಯೋಗಗಳನ್ನು ಗಳಿಸಬಹುದಾಗಿದೆ.
ಬಿಸಿಎ ವಿತ್ ಆರ್ಟಿಫಿಷಲ್ ಇಂಟೆಲಿಜೆನ್ಸಿ ಮೂಲಕ ವಿದ್ಯಾರ್ಥಿಗಳು ಸಾಪ್ಟ್‌ವೇರ್ ಕಂಪನಿ ಮಾರ್ಕೆಟಿಂಗ್ ಇ ಕಾಮರ್ಸ್ ಸಾಪ್ಟ್‌ವೇರ್ ಡೆವಲಪರ್ ಮುಂತಾದ ಉದ್ಯೋಗಗಳನ್ನು ಹೊಂದಬಹುದು.
ಹಾಗೆಯೇ ವಿಶೇಷವಾಗಿ ಬಿ.ಎ ಪದವಿಯೊಂದಿಗೆ ವಿದ್ಯಾರ್ಥಿಗಳಿಗೆ ಎವೀಯೇಶನ್, ಫ್ಯಾಶನ್ ಡಿಸೈನ್ ಮತ್ತು ಮೇಕಪ್ & ಹೆರ್‌ಸ್ಟೈಲ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕಲಿಯುವ ಉತ್ತಮ ಅವಕಾಶವನ್ನು ಸಂಸ್ಥೆ ಒದಗಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪದವಿ ಮುಗಿಯುವ ಮೊದಲೇ ವಿಫುಲ ಉದ್ಯೋಗ ಅವಕಾಶಗಳು ಒದಗಲಿದೆ.


ಉತ್ತಮ ಭವಿಷ್ಯಕ್ಕಾಗಿ ಅಕ್ಷಯ ಕಾಲೇಜು
ವಿದ್ಯಾರ್ಥಿಗಳಿಗೆ ಅಕ್ಷಯ ಕಾಲೇಜು ಅತ್ಯುತ್ತಮ ಆಯ್ಕೆಯಾಗಿದ್ದು, ಪದವಿಯ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಸ್ಫೋಕನ್ ಇಂಗ್ಲೀಷ್ ತರಗತಿಗಳನ್ನು ನೀಡುತ್ತಿದೆ. ವಿಶ್ವವಿದ್ಯಾನಿಲಯದಿಂದ ಹಲವು ರ‍್ಯಾಂಕ್‌ಗಳನ್ನು ಪಡೆದಿರುವ ಅಕ್ಷಯ ಕಾಲೇಜು ಶೈಕ್ಷಣಿಕ ಬದಲಾವಣೆಗೆ ಅನುಸಾರವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ವೃತ್ತಿಪರ ಶಿಕ್ಷಣ ಪಡೆಯಲು ಅವಕಾಶವಾಗುವಂತೆ 2019ರಲ್ಲಿ ಮಂಗಳೂರು ವಿ.ವಿ ಸಂಯೋಜನೆಯೊಂದಿಗೆ ಪ್ರಾರಂಭವಾದ ಪುತ್ತೂರಿನ ಪ್ರಪ್ರಥಮ ಡಿಸೈನಿಂಗ್ ಕಾಲೇಜು, ಏವಿಯೇಷನ್ & ಹಾಸ್ಪಿಟಾಲಿಟಿ ಮ್ಯಾನೇಜ್‌ಮೇಂಟ್ ಕಾಲೇಜು, ಬಿ.ಹೆಚ್.ಎಸ್(ಹೋಟೆಲ್ ಮ್ಯಾ.) ಕಾಲೇಜಾಗಿದೆ. ಇದು ನುರಿತ ಶಿಕ್ಷಕ ವೃಂದದೊಡನೆ ಪುತ್ತೂರಿನ ಸಂಪ್ಯದಲ್ಲಿ ಅತ್ಯಂತ ಆಕರ್ಷಕ ಮತ್ತು ಸುಸಜ್ಜಿತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಕ್ಷಯ ಕಾಲೇಜಿನಲ್ಲಿ ವಿಶಾಲವಾದ ಕ್ಲಾಸ್ ಕೊಠಡಿ, ಉತ್ತಮ ಕ್ಯಾಂಪಸ್ ಅಕ್ಷಯ ಸಂಸ್ಥೆಯ ವಿಶೇಷತೆಗಳಲ್ಲೊಂದಾಗಿದೆ. ಜಿಲ್ಲೆ, ರಾಜ್ಯದ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿದೆ. ಅನುಭವಿ ಅಧ್ಯಾಪಕ ವೃಂದ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಡುಡಿಯುತ್ತಿದ್ದು, ಪಠ್ಯದ ಯಾವುದೇ ಗೊಂದಲಗಳಿಗೆ ಸಮರ್ಥ ಉತ್ತರ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯಭರಿತ ಶೀಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇತರೆ ಸರ್ಟಿಪಿಕೇಟ್ ಕೋರ್ಸ್‌ಗಳನ್ನು ನೀಡಲಾಗುತ್ತಿದೆ.

ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ
ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ, ಸಾಂಸ್ಕೃತಿಕ, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಹೆಚ್ಚಿನ ವಿನಾಯಿತಿ ಸೌಲಭ್ಯ ನೀಡಲಾಗುತ್ತಿದೆ. ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ನೆರವು ನೀಡಲಾಗುತ್ತಿದೆ. ಕ್ರೀಡಾ ಚಟುವಟಿಕೆಗೆ ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ವರ್ಲ್ಡ್ ರೆಕಾರ್ಡ್ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕೋಸ್ಟಲ್ ಕ್ವೀನ್, ಮಿಸ್ಟರ್ ಕರ್ನಾಟಕ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಿದ್ದಲ್ಲದೇ, ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ 5 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರ, ರಾಜ್ಯ ಹಾಗೂ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಹಲವು ಸಾಂಸ್ಕೃತಿಕ ಮತ್ತು ಸಾಹಿತಿಕ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಎನ್.ಎಸ್.ಎಸ್, ಸೋರ್ಟ್ಸ್, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪಿಯು ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು“Aeternus”ಮತ್ತು ವಿ.ವಿ ಮಟ್ಟದ ಪದವಿ ವಿದ್ಯಾರ್ಥಿಗಳಿಗೆ “Krtva”ಸ್ಪರ್ಧೆಗಳನ್ನು ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಒಣಂ ಆಚರಣೆ, ಆಟಿದ ಕೂಟ ಆಚರಣೆ, ಅಕ್ಷಯ ವೈಭವದಂತಹ ಕಾರ್ಯಕ್ರಮಗಳು ಇಲ್ಲಿನ ವಿಶೇಷತೆಯಾಗಿದೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಾಗೂ ಆಧುನೀಕರಣದ ಪ್ರಭಾವವನ್ನು ಸಮರ್ಪಕವಾಗಿ ಎದುಡಿಸಲು ವೃತ್ತಿಪರ ಶಿಕ್ಷಣದ ಅಗತ್ಯ ಇಂದಿದೆ. ಅದಕ್ಕೋಸ್ಕರವೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲತೆಗಾಗಿ ಅಕ್ಷಯ ಶೀಕ್ಷಣ ಸಂಸ್ಥೆ ಸ್ಥಾಪಿಸಿದ್ದೇವೆ. ಸ್ವಾವಲಂಬಿಯಾಗಿ ಬದುಕಬಲ್ಲೆ ಎನ್ನುವ ವಾತಾವರಣ ಮೂಡಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
-ಜಯಂತ್ ನಡುಬೈಲು, ಚೇರ್‌ಮ್ಯಾನ್, ಅಕ್ಷಯ ಕಾಲೇಜು, ಪುತ್ತೂರು

  • Hostel for Boys & Girls.
  • Education Loan Assistant
  • National Level Scholarship
  • Coaching for Competitive Exam
  • Placement Cell &  Campus Interview
  • Well Experienced Teaching Faculty
  • Library and High Equipped Computer Lab
  • Sports & Cultural Association
  • Free Spoken English Class
  • Seminars and Workshops for Students

LEAVE A REPLY

Please enter your comment!
Please enter your name here