ತಾಲೂಕು ಆಡಳಿತ ಸೌಧದಲ್ಲಿ ಅಂಬೇಡ್ಕರ್ ಜಯಂತಿ

0

ಡಾ. ಬಿ.ಆರ್ ಅಂಬೇಡ್ಕರ್ ನಮಗೆಲ್ಲ ರೋಲ್ ಮೊಡೆಲ್ – ಬಿ.ಇ.ಒ ಲೋಕೇಶ್ ಎಸ್.ಆರ್


ಪುತ್ತೂರು: ಸಮಾಜದಿಂದ ಅನೇಕ ಕಷ್ಟಗಳನ್ನು ಅನುಭವಿಸಿದರೂ ಎಷ್ಟೊಂದು ಅಧ್ಯಯನ ಮಾಡಿ ಉನ್ನತ ಸ್ಥಾನಮಾನಗಳನ್ನು ಗಳಿಸಿ ಸಮಾಜದ ಉದ್ಧಾರಕ್ಕಾಗಿ ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆಲ್ಲ ರೋಲ್ ಮೊಡೆಲ್ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಹೇಳಿದರು.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಎ.14 ರಂದು ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ದೇಶ ಕಂಡ ಮಹಾನ್ ಚೇತನ ಮತ್ತು ಅತಿ ದೊಡ್ಡ ವಿದ್ಯಾವಂತ ಡಾ. ಬಿ.ಆರ್ ಅಂಬೇಡ್ಕರ್. ಅವರು ಎಷ್ಟು ಪದವಿ ಪಡೆದಿದ್ದರು ಎಂಬುದನ್ನು ನಾವು ಲೆಕ್ಕ ಹಾಕಬೇಕಾದಿತು. ಸಮಾಜದಲ್ಲಿ ಎಷ್ಟೆ ಕಷ್ಟ ಬಂದರೂ ಸಮಾಜದ ಉದ್ಧಾರಕ್ಕಾಗಿ ಬದುಕಿದರು.
ಓದುವ ಹವ್ಯಾಸವುಳ್ಳ ಅವರು ಹಸಿವು ಆದಾಗ ಮಾತ್ರ ಊಟ ಮಾಡಿ ಉಳಿದ ಹಣದಿಂದ ಪುಸ್ತಕ ಖರಿದಿಸುತ್ತಿದ್ದರು. ವಿದೇಶದಿಂದ ಬರಬೇಕಾದರೆ 20 ಟ್ರಂಕ್‌ಗಳಲ್ಲಿ ಪುಸ್ತಕಗಳನ್ನು ತಂದಿದ್ದರು. ಸಂವಿಧಾನ ರಚನೆಗಾಗಿ ಬೇರೆ ಬೇರೆ ದೇಶದ ಸಂವಿಧಾನ ಓದಿ ಈ ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆಗಳಿಗೆ ಅನ್ವಯವಾಗುವಂತೆ ಸಂವಿಧಾನ ಬರೆದರು. ಇವತ್ತು ನಾವು ಇಲ್ಲಿ ನಿಂತಿದ್ದೇವೆ ಎಂದರೆ ದೇಶದ ಸಂವಿಧಾನ ಕಾರಣ. ದೇಶ ಮುನ್ನಡೆಯಲು ಪ್ರಮುಖ ಪಾತ್ರ ನಮ್ಮ ಸಂವಿಧಾನ ಎಂದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ, ಪುಷ್ಪಾರ್ಚಣೆ ಮಾಡಿದರು. ಈ ಸಂದರ್ಭ ಉಪತಹಸೀಲ್ದಾರ್ ರಾಮಣ್ಣ ನಾಯ್ಕ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಉಪಸ್ಥಿತರಿದ್ದರು. ಕಾವ್ಯ ಬಿ ಕೆ ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನಗ ಕುಮಾರ್ ವಂದಿಸಿದರು. ಹರಿಪ್ರಸಾದ್, ವಿಷ್ಣುಪ್ರಸಾದ್, ಜಯಪ್ರಕಾಶ್, ಲಕ್ಷ್ಮೀದೇವಿ ಅತಿಥಿಗಳನ್ನು ಗೌರವಿಸಿದರು. ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ನಗರಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಸಹಿತ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here