ಉದನೆ: ಸ್ಕಾರ್ಪಿಯೋ ಕಾರು ಮತ್ತು ಮೋಟರ್‌ ಬೈಕ್‌ ನಡುವೆ ಡಿಕ್ಕಿ-ಬೈಕ್‌ ಸವಾರನಿಗೆ ಗಾಯ-ಆಸ್ಪತ್ರೆಗೆ ದಾಖಲು

0

ಕಡಬ: ಸ್ಕಾರ್ಪಿಯೋ ಕಾರು ಮತ್ತು ಮೋಟರ್‌ ಬೈಕ್‌ ನಡುವೆ ರಾಷ್ಟ್ರೀಯ ಹೆದ್ದಾರಿ-75 ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಎ.12ರಂದು ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಗಾಯಗೊಂಡಿದ್ದಾರೆ.

ಮಹಮ್ಮದ್ ಸಫ್ವಾನ್ ಎಂಬಾತ ಚಲಾಯಿಸುತ್ತಿದ್ದ KA19ME6871 ನೋಂದಣಿ ನಂಬ್ರದ ಸ್ಕಾರ್ಪಿಯೋ ಕಾರು, ಕಡಬ ನಿವಾಸಿ ನಿತ್ಯಾನಂದ. ಕೆ ಎಂಬವರು ಚಲಾಯಿಸುತ್ತಿದ್ದ KA19ED2345 ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಬೈಕ್‌ ಸವಾರನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧ ಪಟ್ಟಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಕಾರ್ಪಿಯೋ ಚಾಲಕ ಸಫ್ವಾನ್‌ ವಿರುಧ್ಧ ಪಥದಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅ.ಕ್ರ 42/2024, ಕಲಂ: 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here