ಪೆರಾಬೆ: ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ

0

ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್‌ನ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ ಎ.8ರಂದು ಪೆರಾಬೆಯಲ್ಲಿ ಸಂಜೀವಿನಿ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಶೇಷ ಚೇತನರ ಹೊಸ ಸಂಜೀವಿನಿ ಸಂಘ ರಚನೆ ಮಾಡಲಾಯಿತು. ಈ ಸಂಘವನ್ನು ಒಕ್ಕೂಟದ ಅಧ್ಯಕ್ಷೆ ಸಂಧ್ಯಾ, ಕಾರ್ಯದರ್ಶಿ ಪೂರ್ಣಿಮಾ ಅವರು ಉದ್ಘಾಟಿಸಿದರು. ಎಂಬಿಕೆ ಮಾಲತಿ ಅವರು ಸಂಜೀವಿನಿ ಸಂಘದ ನಿಯಮಗಳನ್ನು ತಿಳಿಸಿದರು. ಸಂಘಕ್ಕೆ ಅನಿಕೇತನ ಸಂಜೀವಿನಿ ಸಂಘ ಎಂದು ನಾಮಕರಣ ಮಾಡಲಾಯಿತು. ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಕಾರ್ಯದರ್ಶಿಯಾಗಿ ಕರುಣಾಕರ ಅವರನ್ನು ಆಯ್ಕೆ ಮಾಡಲಾಯಿತು.


ವಿಆರ್‌ಡಬ್ಲ್ಯು ಕಾರ್ಯಕರ್ತ ಮುತ್ತಪ್ಪ ನಿರೂಪಿಸಿದರು. ಎಂಬಿಕೆ ಮಾಲತಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಎಲ್‌ಸಿಆರ್‌ಪಿಗಳು, ಪಶು ಸಖಿ, ಕೃಷಿ ಸಖಿ, ಚೇತನ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here