ಏ.20-21: ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವ ಸಂಭ್ರಮ

0

ನಾಗ ದೇವರಿಗೆ ತಂಬಿಲ | ಶ್ರೀ ಸತ್ಯನಾರಾಯಣ ಪೂಜೆ | ಹರಿಸೇವೆ | ಧರ್ಮದೈವಗಳ ನೇಮೋತ್ಸವ

ಪುತ್ತೂರು: ಅರಿಯಡ್ಕ ಗ್ರಾಮದ ಅಮೈ ಬಾರಿಕೆ ತರವಾಡು ಕುಟುಂಬ ದೈವಗಳ ನೇಮೋತ್ಸವವು ಏ.20 ಮತ್ತು 21 ರಂದು ಅಮೈ ಬಾರಿಕೆ ಕುಟುಂಬಸ್ಥರ ತರವಾಡು ಮನೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಗಣಹೋಮ, ನಾಗ ದೇವರಿಗೆ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ ಮತ್ತು ಧರ್ಮದೈವಗಳಿಗೆ ನೇಮೋತ್ಸವವು ನಡೆಯಲಿದೆ.

ಏ.20 ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಶುದ್ಧಿಕಲಶ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ಕ್ಕೆ ಅಮೈ ತರವಾಡು ದೈವಸ್ಥಾನದಿಂದ ಧರ್ಮದೈವ ಪರಿವಾರ ದೈವಗಳ ಭಂಡಾರ ಕೋಡಿಯಾಡಿಗೆ ಬರುವುದು ಬಳಿಕ ಕತ್ಯಾಡಿ ಗ್ರಾಮ ದೈವಸ್ಥಾನದಿಂದ ಗ್ರಾಮ ದೈವ ಧೂಮಾವತಿಯ ಭಂಡಾರ ತಂದು ಅಮೈ ತರವಾಡು ಕೋಡಿಯಾಡಿಯಲ್ಲಿ ಏರಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ನೇಮೋತ್ಸವ ಆರಂಭ, ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 10 ರಿಂದ ಧರ್ಮದೈವ (ಪಿಲಿಭೂತ) ಮತ್ತು ರುದ್ರಾಂಡಿ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.


ಏ.21 ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ, ಲೆಕ್ಕೆಸಿರಿ ಬಾವನ ದೈವದ ನೇಮೋತ್ಸವ ನಡೆಯಲಿದ್ದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗ್ರಾಮ ದೈವದ ನೇಮೋತ್ಸವ ನಡೆಯಲಿದೆ. ಸಂಜೆ ಅಮೈ ತರವಾಡು ಮನೆಯಿಂದ ಕಲ್ಲುರ್ಟಿ ದೈವಗಳ, ಕೊರತ್ತಿ, ಕುಪ್ಪೆಪಂಜುರ್ಲಿ ಮತ್ತು ಗುಳಿಗ ದೈವದ ಭಂಡಾರವನ್ನು ಕೋಡಿಯಾಡಿಯಲ್ಲಿ ಏರಿಸುವ ಕಾರ್ಯಕ್ರಮದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30 ರಿಂದ ಕಲ್ಲುರ್ಟಿ ದೈವಗಳ, ಕೊರತ್ತಿ,ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸುವಂತೆ ಕುಟುಂಬದ ಯಜಮಾನ ಸೋಮಪ್ಪ ರೈ ಅಮೈ ಮಿತ್ತಂಡ, ಅಮೈ ಬಾರಿಕೆ ತರವಾಡು ಕುಟುಂಬ ಆಡಳಿತ ಮಂಡಳಿದ ಅಧ್ಯಕ್ಷ ಲೋಕೇಶ್ ರೈ ಅಮೈ, ಗೌರವಾಧ್ಯಕ್ಷ ಪದ್ಮನಾಭ ರೈ ಅಗೋಳಿಗುತ್ತು, ಸಂಚಾಲಕ ಚಂದ್ರಶೇಖರ ರೈ ಅಮೈ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಣಿತ ಭಜನೆ, ನಿರಂತರ ಅನ್ನದಾನ
ನೇಮೋತ್ಸವದ ವಿಶೇಷ ಆಕರ್ಷಣೆಯಾಗಿ ದೈವಗಳ ಭಂಡಾರ ಬರುವ ದಾರಿಯುದ್ಧಕ್ಕೂ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಇದಲ್ಲದೆ ದೈವಸ್ಥಾನದಲ್ಲೂ ಕುಣಿತ ಭಜನೆ ನಡೆಯಲಿದೆ. ನೇಮೋತ್ಸವದ ಎರಡೂ ದಿನಗಳಲ್ಲೂ ನಿರಂತರ ಅನ್ನದಾನ ಹಾಗೂ ಉಪಹಾರದ ವ್ಯವಸ್ಥೆ ಇರಲಿದೆ.

LEAVE A REPLY

Please enter your comment!
Please enter your name here