ಉಪ್ಪಿನಂಗಡಿ: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಉಪ್ಪಿನಂಗಡಿಯಲ್ಲಿ ಎ.16ರಂದು ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ನೂರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಅವರಿಗೆ ಬೆಂಗಾವಲಾಗಿ ಕಾಲ್ನಡಿಗೆಯಲ್ಲಿ ಸಾಗಿ ಬಂದರು.
ಮಧ್ಯಾಹ್ನ 2 ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಿಂದ ರೋಡ್ ಷೋ ಆರಂಭವಾಯಿತು. ಉಪ್ಪಿನಂಗಡಿ ಪೇಟೆಯ ಮೂಲಕ ಸಾಗಿ ಗಾಂಧಿಪಾರ್ಕ್‌ಗೆ ತೆರಳಿ ಅಲ್ಲಿಂದ ವಾಪಸ್ಸಾದ ಮತಯಾಚನಾ ಮೆರವಣಿಗೆ ಉಪ್ಪಿನಂಗಡಿಯ ಬಸ್‌ನಿಲ್ದಾಣದಲ್ಲಿ ಕೊನೆಗೊಂಡು, ಬಸ್ ನಿಲ್ದಾಣದಲ್ಲಿ ಪ್ರಚಾರ ಸಭೆ ನಡೆಯಿತು.
ಈ ಸಂದರ್ಭ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಡಿಸಿಸಿ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು,ಉಮಾನಾಥ ಶೆಟ್ಟಿ ಪೆರ್ನೆ, ವಲಯಾಧ್ಯಕ್ಷ ರವೀಂದ್ರ ಪಟಾರ್ತಿ, ವಲಯಾಧ್ಯಕ್ಷರಾದ ಅನಿ ಮಿನೇಜಸ್, ಆದಂ ಕೊಪ್ಪಳ, ಮೋನಪ್ಪ ಪಮ್ಮನಮಜಲು, ಪ್ರಮುಖರಾದ ಈಶ್ವರ ಭಟ್ ಪಂಜಿಗುಡ್ಡೆ, ಎಂ.ಎಸ್. ಮುಹಮ್ಮದ್, ಡಾ. ರಘು ಬೆಳ್ಳಿಪ್ಪಾಡಿ, ತೌಸೀಫ್ ಯು.ಟಿ., ಶಬೀರ್ ಕೆಂಪಿ, ಇಬ್ರಾಹೀಂ ಕೆ.,ಸಿದ್ದೀಕ್ ಕೆಂಪಿ, ಜಯಪ್ರಕಾಶ್ ಬದಿನಾರು, ವಿನಾಯಕ ಪೈ, ನಝೀರ್ ಬೆದ್ರೋಡಿ, ವಿಕ್ರಂ ಶೆಟ್ಟಿ ಅಂತರ, ಸೋಮನಾಥ, ಜಗನ್ನಾಥ ಶೆಟ್ಟಿ ನಡುಮನೆ, ಗೀತಾ ದಾಸರಮೂಲೆ, ಲೋಕೇಶ್ ಪೆಲತ್ತಡಿ, ಸವಿತಾ ಹರೀಶ್, ಫಾರೂಕ್ ಜಿಂದಗಿ ಮತ್ತಿತರರು ಭಾಗವಹಿಸಿದರು.ಸುಮಾರು 25ರಷ್ಟು ಕಾರುಗಳು ರ‍್ಯಾಲಿಯ ಜೊತೆಗಿದ್ದವು.